Advertisement

ಡ್ರಗ್ಸ್‌ ಕೇಸ್‌ ನಲ್ಲಿ ಚಿಕ್ಕ, ಚಿಕ್ಕ ಮೀನುಗಳನ್ನು ಹಿಡಿಯಲಾಗಿದೆ : ಇಂದ್ರಜಿತ್‌ ಲಂಕೇಶ್‌

09:22 AM Jan 29, 2021 | Team Udayavani |

ಬೆಂಗಳೂರು: ಡ್ರಗ್ಸ್‌ ದಂಧೆ ಕೇಸ್‌ನಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಇದ್ದಾರೆ ಎಂದು ನಟ ನಿರ್ದೇಶನ ಇಂದ್ರಜಿತ್‌ ಲಂಕೇಶ್‌ ಹೇಳಿದ್ದಾರೆ.

Advertisement

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಸಂಬಂಧ ಇಂದ್ರಜಿತ್‌ಗೆ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಆಗಮಿಸುವಂತೆ ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ ಅವರು ಗುರುವಾರ ಪೊಲೀಸ್‌ ಆಯುಕ್ತರ ಕಚೇರಿಗೆ ಆಗಮಿಸಿದ್ದರು. ಆದರೆ, ತನಿಖಾಧಿಕಾರಿಗಳು ಬಂದೋಬಸ್ತ್ ಡ್ನೂಟಿಯಲ್ಲಿದ್ದ ಕಾರಣ ಅವರ ವಿಚಾರಣೆಯನ್ನು ನಡೆಸಲಿಲ್ಲ.

ಇದನ್ನೂ ಓದಿ:ಘಾಜಿಪುರ ಗಡಿ ಉದ್ವಿಗ್ನ : ಪ್ರತಿಭಟನ ಸ್ಥಳ ಬಿಡುವಂತೆ ಉ.ಪ್ರದೇಶ ಸರಕಾರ ಆದೇಶ

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಇಂದ್ರಜಿತ್‌, ಡ್ರಗ್ಸ್‌ ಕೇಸ್‌ನಲ್ಲಿ ಚಿಕ್ಕ, ಚಿಕ್ಕ ಮೀನುಗಳನ್ನು ಹಿಡಿಯಲಾಗಿದೆ. ಆದರೆ, ಇದರಲ್ಲಿ ದೊಡ್ಡ ತಿಮಿಂಗಲಗಳು, ದೊಡ್ಡ ವ್ಯಕ್ತಿಗಳು ಇದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.

ಇದನ್ನೂ ಓದಿ: ಸಂಸತ್‌ ಅಧಿವೇಶನ ಇಂದು ಶುರು: ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ರಾಷ್ಟ್ರಪತಿ

Advertisement

ಬೆಂಗಳೂರು ಡ್ರಗ್ಸ್‌ ರಾಜಧಾನಿಯಾಗಿದೆ. ವಿಧಾನಮಂಡಲ ಅಧಿವೇಶನದಲ್ಲಿ ಈ ಬಗ್ಗೆ ವಿರೋಧಪಕ್ಷಗಳು ದನಿಯೆತ್ತಿ ಪ್ರಕರಣವನ್ನು ಮತ್ತಷ್ಟು ಚುರುಕುಗೊಳಿಸುವಂತೆ ಹೇಳಬೇಕು ಎಂದರು

Advertisement

Udayavani is now on Telegram. Click here to join our channel and stay updated with the latest news.

Next