Advertisement

ಕನ್ನಡ ಮೀಡಿಯಂಗೆ ಇಂದ್ರಜಿತ್‌ ಎಂಟ್ರಿ!

05:18 PM Sep 27, 2017 | Team Udayavani |

ಗುರುನಂದನ್‌ ಅಭಿನಯದ “ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ಅದೆಷ್ಟು ಜನ ಅತಿಥಿ ಪಾತ್ರ ಮಾಡುತ್ತಾರೋ ಗೊತ್ತಿಲ್ಲ. ಇದಕ್ಕೂ ಮುನ್ನ ಸುದೀಪ್‌ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಅದಕ್ಕೂ ಮುನ್ನ ಪ್ರಥಮ್‌ ಚಿತ್ರದಲ್ಲೊಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಈಗ ವಿಶೇಷ ಪಾತ್ರ ಮಾಡಿದವರ ಪಟ್ಟಿಯಲ್ಲಿ ಇಂದ್ರಜಿತ್‌ ಲಂಕೇಶ್‌ ಸಹ ಇದ್ದಾರೆ ಎನ್ನುವುದು ವಿಶೇಷ.

Advertisement

ಬಹಳಷ್ಟು ಜನರಿಗೆ ಗೊತ್ತಿಲ್ಲದ ಒಂದು ವಿಷಯವೆಂದರೆ, “ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ಇಂದ್ರಜಿತ್‌ ಲಂಕೇಶ್‌ ಸಹ ಕಾಣಿಸಿಕೊಂಡಿರುವುದು. ಈ ಚಿತ್ರದ ಹಾಡೊಂದರಲ್ಲಿ ಅವರು ಕಾಣಿಸಿಕೊಂಡಿದ್ದು, ಬಹಳ ಹಿಂದೆಯೇ ಆ ಹಾಡಿನ ಚಿತ್ರೀಕರಣವಾಗಿದೆ. ಆದರೆ, ಚಿತ್ರತಂಡದವರು ಮಾತ್ರ ಎಲ್ಲೂ ಆ ವಿಷಯವನ್ನು ಹೊರಗೆ ಬಿಟ್ಟಿರಲಿಲ್ಲ. ಈಗ ಚಿತ್ರತಂಡದವರು ಚಿತ್ರದ ಒಂದಿಷ್ಟು ಫೋಟೋಗಳನ್ನು ಬಿಡುಗಡೆ ಮಾಡುವ ಮೂಲಕ, ಚಿತ್ರದಲ್ಲಿ ಇಂದ್ರಜಿತ್‌ ನಟಿಸಿದ್ದಾರೆ ಎಂಬ ವಿಷಯವನ್ನೂ ಹೊರಗೆ ಬಿಟ್ಟಿದ್ದಾರೆ.

ಬೆಂಗಳೂರಿನ ಟೌನ್‌ ಹಾಲ್‌ ಎದುರು ಇಂದ್ರಜಿತ್‌ ಸ್ಯಾಕ್ಸೊಫೋನ್‌ ನುಡಿಸುತ್ತಿರುವ ಫೋಟೋಗಳು ಲಭ್ಯವಾಗಿದ್ದು, ಇದು ಹಾಡಿನ ದೃಶ್ಯಗಳು ಎಂದು ಹೇಳಲಾಗುತ್ತಿದೆ. “ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ಗುರುನಂದನ್‌, ಆಶಿಕಾ, ಆವಂತಿಕಾ ಶೆಟ್ಟಿ ಮುಂತಾದವರು ನಟಿಸಿದ್ದು, ಆ್ಯಂಜಲೀನಾ ಎಂಬ ರಷ್ಯದ ಮಾಡೆಲ್‌ ನಟಿಸಿರುವುದು ವಿಶೇಷ. ಜೊತೆಗೆ, “ಬಿಗ್‌ ಬಾಸ್‌ ಸೀಸನ್‌-4′ ವಿನ್ನರ್‌ ಪ್ರಥಮ್‌ ಕೂಡಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ, ಈ ಚಿತ್ರವನ್ನು ನರೇಶ್‌ ಕುಮಾರ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ “ಫ‌ಸ್ಟ್‌ ರ್‍ಯಾಂಕ್‌ ರಾಜು’ ಸಿನಿಮಾ ಮೂಲಕ ಗಾಂಧಿನಗರದಲ್ಲಿ ಸುದ್ದಿಯಾದ ನರೇಶ್‌ ಈಗ ಮತ್ತೂಮ್ಮೆ ಗುರುನಂದನ್‌ ಜೊತೆಗೆ ಸಿನಿಮಾ ಮಾಡಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಅವರದ್ದೇ. ಇನ್ನು ಕಿರಣ್‌ ರವೀಂದ್ರನಾಥ್‌ ಸಂಗೀತ, ಶೇಖರ್‌ಚಂದ್ರ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next