Advertisement

ಡ್ರಗ್ಸ್ ಪ್ರಕರಣದಲ್ಲಿ ಇನ್ನೂ ದೊಡ್ಡದೊಡ್ಡ ತಿಮಿಂಗಿಲಗಳಿವೆ : ಇಂದ್ರಜಿತ್ ಲಂಕೇಶ್

02:04 PM Aug 24, 2021 | Team Udayavani |

ಬೆಂಗಳೂರು: ಇವತ್ತಿನ ಎಫ್​ಎಸ್​ಎಲ್​ ವರದಿ ನೋಡಿ ಸಮಾಧಾನವಾಗಿದೆ. ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ಈ ಪ್ರಕರಣದಲ್ಲಿ ಇನ್ನೂ ದೊಡ್ಡದೊಡ್ಡ ತಿಮಿಂಗಿಲಗಳಿವೆ. ಅವರನ್ನು ಹಿಡಿಯುವುದು ಇನ್ನೂ ಬಾಕಿ ಇದೆ. ಈ ಬಗ್ಗೆ ಕೋರ್ಟ್​ನಲ್ಲಿ ತನಿಖೆ ನಡೆಯುತ್ತಿದೆ. ಹಾಗಾಗಿ, ನಾನು ಅದನ್ನು ಬಹಿರಂಗ ಪಡಿಸುವಂತಿಲ್ಲ ಎಂದು ಪತ್ರಕರ್ತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

Advertisement

ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ಕುರಿತಾದ ಎಫ್​ಎಸ್​ಎಲ್ ವರದಿ ಇಂದು ಪೊಲೀಸರ ಕೈಗೆ ಸೇರಿದ್ದು, ಪರೀಕ್ಷೆಯಲ್ಲಿ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಸೇರಿದಂತೆ ಹಲವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಲಂಕೇಶ್, ಈ ಪ್ರಕರಣದ ತನಿಖೆಗೆ ಸಿಸಿಬಿಗೆ ನಾನು ಎಲ್ಲಾ ರೀತಿಯಲ್ಲೂ ಸಹಕರಿಸುತ್ತೇನೆ. ಮತ್ತೆ ಸಿಸಿಬಿ ಅಧಿಕಾರಿಗಳು ಕರೆದರೆ ಸಹಕರಿಸಲು ಸಿದ್ದನಿದ್ದೇನೆ. 12 ಕೋಟಿಯಷ್ಟು ಡ್ರಗ್ಸ್​ ಅನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಸಪ್ಲೈ ಮಾಡುತ್ತಾರೆ. ಇದರಿಂದ ಯುವಕರು, ವಿದ್ಯಾರ್ಥಿಗಳು ಹಾಳಾಗ್ತಾರೆ ಎಂದರು.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವರಿಗೆ ದೂರು ನೀಡಿದ್ದನ್ನು ಪ್ರಸ್ತಾಪಿಸಿದ ಅವರು, ನನಗಿದ್ದ ಮಾಹಿತಿ ಆಧರಿಸಿ ಗೃಹ ಸಚಿವರಿಗೆ ದೂರು ನೀಡಿದ್ದೆ. ಆಗ ಸ್ಯಾಂಡಲ್‌ವುಡ್‌ನ ಕೆಲವರು ನನ್ನನ್ನು ಟೀಕಿಸಿದ್ದರು. ಇಂದ್ರಜಿತ್‌ಗೆ ಕೆಲಸ ಇಲ್ಲ ಎಂದು ಹೇಳಿದ್ದರು. ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಬೆಂಗಳೂರಿಗೆ ಬರುತ್ತಿದ್ದು, ಇದರಿಂದ ಬೆಂಗಳೂರಿನಲ್ಲಿ ಡ್ರಗ್ಸ್‌ಗಿರುವ ಬೇಡಿಕೆ ತಿಳಿಯುತ್ತದೆ. ಹೀಗಾಗಿ, ಡ್ರಗ್ಸ್‌ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next