Advertisement

ಇಂದ್ರಧನುಷ್‌ ಲಸಿಕಾ ಅಭಿಯಾನಕ್ಕೆ ಚಾಲನೆ

04:00 PM Dec 02, 2019 | Suhan S |

ಶಿಡ್ಲಘಟ್ಟ: ಮಾರಣಾಂತಿಕ ಕಾಯಿಲೆಗಳಿಗೆ ಲಸಿಕೆ ಪಡೆಯದ ಮಕ್ಕಳು ಮತ್ತು ಗರ್ಭಿಣಿಯರಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವ ಸಲುವಾಗಿ ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಇಂದ್ರಧನುಷ್‌ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕುಆರೋಗ್ಯಾಕಾರಿ ಡಾ.ವೆಂಕಟೇಶ್‌ಮೂರ್ತಿ ತಿಳಿಸಿದರು.

Advertisement

ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಇಂದ್ರಧನುಷ್‌ ಲಸಿಕೆ ಅಭಿಯಾನದಭಿತ್ತಿಪತ್ರ ಹಾಗೂ ಇತರೆ ಪ್ರಚಾರಸಾಮಗ್ರಿಗಳನ್ನು ಬಿಡುಗಡೆ ಮಾಡಿ ಮಾತನಾಡಿ, ತಾಲೂಕಿನಲ್ಲಿ ಡಿಸೆಂಬರ್‌ನಿಂದ ಮಾರ್ಚ್‌ ಮಾಹೆಯ ಅಂತಿಮದೊಳಗೆ 4 ಹಂತಗಳಲ್ಲಿ ಇಂದ್ರಧನುಷ್‌ಲಸಿಕೆ ಅಭಿಯಾನ ನಡೆಸಲಾಗುವುದು ಎಂದರು.

ಡಿ.2ರಂದು ಆರಂಭವಾಗುವ ಅಭಿಯಾನವು ಮಾರ್ಚ್‌ 6ಕ್ಕೆ ಮುಗಿಯಲಿದೆ. ಡಿ.2, .6, ಫೆ3 ಹಾಗೂ ಮಾರ್ಚ್‌ 2 ರಂದು ಲಸಿಕೆ ಅಭಿಯಾನ ನಡೆಯಲಿದೆ. ಪ್ರತಿ ಹಂತದಲ್ಲೂ 5 ದಿನಗಳ ಕಾಲ ಅಭಿಯಾನ ನಡೆಯಲಿದೆ ಎಂದು ವಿವರಿಸಿದರು. ಶಿಡ್ಲಘಟ್ಟ ನಗರ ಸೇರಿ ಗ್ರಾಮೀಣ ಭಾಗದಲ್ಲಿ ಹುಟ್ಟಿದ ಮಗುವಿನಿಂದ 2 ವರ್ಷದೊಳಗಿನ(24 ತಿಂಗಳವರೆಗಿನ ಮಗು) ಒಟ್ಟು 144 ಮಂದಿ ಮಕ್ಕಳನ್ನು ಗುರುತಿಸಿದ್ದು, ಇವರೆಲ್ಲರಿಗೂ ಲಸಿಕೆ ಹಾಕಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ನಗರ ಪ್ರದೇಶದಲ್ಲಿ 53 ಹಾಗೂ ಗ್ರಾಮೀಣ ಭಾಗದಲ್ಲಿ 91 ಮಕ್ಕಳನ್ನು ಗುರುತಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಜತೆಗೂಡಲಿದ್ದಾರೆ ಎಂದು ಹೇಳಿದರು.

ತಹಶೀಲ್ದಾರ್‌ ಎಂ.ದಯಾನಂದ ಲಸಿಕಾ ಅಭಿಯಾನದ ಭಿತ್ರಿಪತ್ರಗಳನ್ನು ಬಿಡುಗಡೆ ಮಾಡಿದರು. ರೆಡ್‌ಕ್ರಾಸ್‌ ಸೊಸೈಟಿಯ ಜಿಲ್ಲಾ ಕಾರ್ಯದರ್ಶಿ ಗುರುರಾಜ್‌, ಶಿಕ್ಷಣ ಇಲಾಖೆಯ ರಂಗನಾಥ್‌, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯಾಕಾರಿ ಮುನಿರತ್ನಮ್ಮ, ಅಕ್ಕಲರೆಡ್ಡಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next