Advertisement

ವಿಶ್ವಬ್ಯಾಂಕ್‌ಗೆ ನೂಯಿ?

12:30 AM Jan 17, 2019 | |

ನ್ಯೂಯಾರ್ಕ್‌: ಪೆಪ್ಸಿಯ ಮಾಜಿ ಸಿಇಒ ಇಂದ್ರಾ ನೂಯಿ (63) ಅವರನ್ನು ವಿಶ್ವ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವ ಬಗ್ಗೆ ಅಮೆರಿಕ ಚಿಂತನೆ ನಡೆಸಿದೆ. ವಿಶೇಷವಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಅವರ ಸಲಹೆಗಾರ್ತಿ ಇವಾಂಕಾ ಟ್ರಂಪ್‌ ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದು “ದ ನ್ಯೂಯಾರ್ಕ್‌ ಟೈಮ್ಸ್‌’ ವರದಿ ಮಾಡಿದೆ. ಸದ್ಯ ಈ ಪ್ರಕ್ರಿಯೆ ಇನ್ನೂ ಆರಂಭದ ಹಂತದಲ್ಲಿದೆ. ಒಂದು ವೇಳೆ ಅಮೆರಿಕ ಸರಕಾರ ನೂಯಿ ಅವರನ್ನು ಆಯ್ಕೆ ಮಾಡಿದರೂ, ಹೊಸ ಹೊಣೆ ಸ್ವೀಕರಿಸಲಿದ್ದಾರೆಯೋ ಎನ್ನುವುದು ಖಚಿತವಾಗಿಲ್ಲ.  ಅಮೆರಿಕದ ಹಣಕಾಸು ಖಾತೆಯ ಹಿರಿಯ ಅಧಿಕಾರಿ ಡೇವಿಡ್‌ ಮಲ್ಪಾಸ್‌, ಓವರ್‌ಸೀಸ್‌ ಇನ್ವೆಸ್ಟ್‌ ಮೆಂಟ್‌ ಕಾರ್ಪ್‌ ಸಿಇಒ ರೇ ವಾಶ್‌ಬರ್ನ್ ಮತ್ತು ಇತರರು ಈ ಹುದ್ದೆಗಾಗಿ ಲಾಬಿ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next