ಇಂದೋರ್: ವಿವಾಹ ಸಮಾರಂಭದಲ್ಲಿ ವಧು – ವರ ವಿಷ ಸೇವಿಸಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿರುವುದು ವರದಿಯಾಗಿದೆ.
ಮಂಗಳವಾರ( ಮೇ.16 ರಂದು) ಕನಾಡಿಯಾ ಪ್ರದೇಶದ ಆರ್ಯ ಸಮಾಜ ದೇವಸ್ಥಾನದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ವಧು ವರರ ನಡುವೆ ವಾಗ್ವಾದ ಉಂಟಾಗಿದೆ. ಇನ್ನೇನು ಹಾರ ಬದಲಾಯಿಸಿ ತಾಳಿ ಕಟ್ಟಬೇಕು ಎನ್ನುವಾಗಲೇ ವರ ಮದುವೆ ವೇದಿಕೆಯ ಬದಿಗೆ ಹೋಗಿದ್ದಾನೆ. ಆ ಬಳಿಕ ಮದುವೆ ವೇದಿಕೆಯಲ್ಲಿ ತಾನು ವಿಷ ಸೇವಿಸಿ ಬಂದಿದ್ದೇನೆ ಎಂದು ವರ ದೀಪಕ್ ಅಹಿರ್ವಾರ್ ವಧು ನಿಶಾಳಿಗೆ ಹೇಳಿದ್ದಾನೆ. ವರನ ಮಾತನ್ನು ಕೇಳಿ ವಧು ಕೂಡ ವಿಷ ಸೇವಿಸಿದ್ದಾಳೆ.
ಗಂಭೀರ ಸ್ಥಿತಿಯಲ್ಲಿ ಇಬ್ಬರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವರ ಮೃತಪಟ್ಟಿದ್ದು, ವಧು ಜೀವನ್ಮರಣದ ಹೋರಾಟ ಮಾಡುತ್ತಿದ್ದಾಳೆ. ಆಕೆಯನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದೆ ಎಂದು ವರದಿ ತಿಳಿಸಿದೆ.
ಯುವತಿ ಮದುವೆಯಾಗಲು ಒತ್ತಡ ಹೇರುತ್ತಿದ್ದಳು. ನಮ್ಮ ಹುಡುಗನಿಗೆ ಇನ್ನು ಚಿಕ್ಕ ವಯಸ್ಸು ಆತ ಸ್ವಲ್ಪ ಕೆರಿಯರ್ ಬಿಲ್ಡ್ ಮಾಡಿಕೊಳ್ಳಬೇಕೆಂದು ಹೇಳಿ, ಎರಡು ವರ್ಷದ ಸಮಯ ಕೇಳಿದ್ದ. ಆದರೆ ಇದಕ್ಕೆ ಆಕೆ ಒಪ್ಪದೆ ಹುಡುಗನ ವಿರುದ್ಧ ದೂರು ನೀಡಿದ್ದಳು. ಇದೇ ಕಾರಣದಿಂದ ಮದುವೆ ಬೇಗ ಮಾಡಲು ತೀರ್ಮಾನ ಮಾಡಿದ್ದೆವು ಎಂದು ವರನ ಕುಟುಂಬ ಸದಸ್ಯರು ಹೇಳಿದ್ದಾರೆ.
Related Articles
ಈ ಬಗ್ಗೆ ಇನ್ನು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.