ಜಕಾರ್ತಾ : ಇಂಡೋನೇಷ್ಯಾದಲ್ಲಿ ನಡೆದ ಫುಟ್ಬಾಲ್ ಪಂದ್ಯಾವಳಿ ವೇಳೆ ನಡೆದ ಹಿಂಸಾಚಾರದಲ್ಲಿ ಮಕ್ಕಳು, ಪೊಲೀಸರು ಸೇರಿದಂತೆ ಸುಮಾರು 127 ಮಂದಿ ಸಾವನ್ನಪ್ಪಿ, ನೂರಾರು ಮಂದಿ ಗಾಯಗೊಂಡಿರುವ ಘಟನೆ ಪೂರ್ವ ಜಾವಾ ಪ್ರಾಂತ್ಯದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಇಂಡೋನೇಷ್ಯಾದ ಪೂರ್ವ ಜಾವಾದ ಪ್ರಾಂತ್ಯದ ಮಲಾಂಗ್‌ನಲ್ಲಿರುವ ಕಂಜುರುಹಾನ್ ಕ್ರೀಡಾಂಗಣದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಸಾವಿರಾರು ಮಂದಿ ಪ್ರೇಕ್ಷಕರು ನೆರೆದಿದ್ದರು.
ಇಲ್ಲಿನ ಅರೆಮಾ ಫುಟ್‌ಬಾಲ್ ಕ್ಲಬ್ ಅನ್ನು ಪ್ರತಿಸ್ಪರ್ಧಿ ತಂಡ ಪರ್ಸೆಬಾಯಾ ಸೋಲಿಸಿತು. ಇದರಿಂದ ಬೇಸರಗೊಂಡ ಅರೆಮಾ ಫುಟ್‌ಬಾಲ್ ಕ್ಲಬ್ ತಂಡದ ಅಭಿಮಾನಿಗಳು ಕ್ರೀಡಾಂಗಣದ ಒಳಗೆ ಪ್ರವೇಶಿಸಿದ್ದಾರೆ ಈ ವೇಳೆ ಅಭಿಮಾನಿಗಳನ್ನು ಪೊಲೀಸರು ತಡೆಯಲು ಯತ್ನಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣದೊಳಗೆ ಪ್ರವೇಶಿದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿದೆ ಈ ವೇಳೆ ಪೊಲೀಸರು ಹಾಗೂ ಕ್ರೀಡಾ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದು ಹಿಂಸಾಚಾರಕ್ಕೆ ತಿರುಗಿದೆ ಈ ಸಂದರ್ಭ ಪೊಲೀಸರು ಅಶ್ರುವಾಯು ಹಾರಿಸಿದ್ದಾರೆ ಇದರಿಂದ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿ ಸುಮಾರು 127 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ನೂರಾರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ, ಸದ್ಯ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಗೊಂಡಿದ್ದು ಪೊಲೀಸರು ಬಿಗಿಬಂದೋಬಸ್ತ್ ನಡೆಸಿದ್ದಾರೆ.
ಇದನ್ನೂ ಓದಿ : ಇಂದು ಗುವಾಹಟಿಯಲ್ಲಿ ಟಿ20 ಪೈಪೋಟಿ; ಸರಣಿ ಗೆಲುವಿಗೆ ಭಾರತ ಸ್ಕೆಚ್