Advertisement

ಭಾರತ-ಪಾಕ್‌ ಡೇವಿಸ್‌ ಕಪ್‌ ಮುಂದೂಡಿಕೆ

02:11 AM Aug 23, 2019 | Sriram |

ಹೊಸದಿಲ್ಲಿ: ಭಾರತ-ಪಾಕಿಸ್ಥಾನ ನಡುವಿನ ಡೇವಿಸ್‌ ಕಪ್‌ ಟೆನಿಸ್‌ ವಿವಾದ ಒಂದು ಹಂತಕ್ಕೆ ಅಂತ್ಯ ಕಂಡಿದೆ. ಇಸ್ಲಮಾಬಾದ್‌ನಲ್ಲಿ ಸೆ. 14 ಮತ್ತು 15ರಂದು ನಡೆಯಬೇಕಿದ್ದ ಪಂದ್ಯಾವಳಿಯನ್ನು ತಟಸ್ಥ ತಾಣಕ್ಕೆ ವರ್ಗಾಯಿಸಿ, ಇಲ್ಲವೇ ಮುಂದೂಡಿ ಎಂಬ ಭಾರತದ ಬೇಡಿಕೆಯನ್ನು ಅಂತಾರಾಷ್ಟ್ರೀಯ ಟೆನಿಸ್‌ ಸಂಸ್ಥೆ ಪುರಸ್ಕರಿಸಿದೆ. ಈ ಕೂಟವನ್ನು ನವೆಂಬರ್‌ಗೆ ಮುಂದೂಡಲಾಗಿದೆ.

Advertisement

ಸದ್ಯ ಎರಡೂ ದೇಶಗಳ ನಡುವೆ ಉದ್ವಿಗ್ನ ವಾತಾವರಣವಿರುವುದರಿಂದ ವಿಶೇಷ ಆದ್ಯತೆಯಡಿ ಕೂಟವನ್ನು ಮುಂದೂಡುವುದೇ ಸರಿ ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಐಟಿಎಫ್ ಸ್ಪಷ್ಟಪಡಿಸಿದೆ.

ಪೂರ್ವನಿಗದಿಯಂತೆ ಇಸ್ಲಮಾ ಬಾದ್‌ನಲ್ಲೇ ಪಂದ್ಯಾವಳಿ ನಡೆಯ ಬೇಕಿತ್ತು. ಎಲ ್ಲರೀತಿಯ ಭದ್ರತೆ ನೀಡಲು ನಾವು ಸಿದ್ಧ, ಪಂದ್ಯ ಇಲ್ಲೇ ನಡೆಯಬೇಕು ಎಂದು ಪಾಕಿಸ್ಥಾನ ಟೆನಿಸ್‌ ಸಂಸ್ಥೆ ಹಠಹಿಡಿದು ಕುಳಿತಿತ್ತು. ಈ ನಿಟ್ಟಿನಲ್ಲಿ ಪಾಕಿಸ್ಥಾನಕ್ಕೆ ಹಿನ್ನಡೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next