Advertisement

ಇಂಡೋ-ಪಾಕ್‌ ಕ್ರಿಕೆಟ್‌ ಸರಣಿ ಅಸಾಧ್ಯ: ಗಾವಸ್ಕರ್‌

11:43 AM Apr 16, 2020 | Sriram |

ಹೊಸದಿಲ್ಲಿ: ಕೆಲ ದಿನಗಳ ಹಿಂದಷ್ಟೇ ಕೋವಿಡ್ 19 ವೈರಸ್‌ ವಿರುದ್ಧದ ಹೋರಾಟಕ್ಕೆ ಹಣ ಸಂಗ್ರಹಿಸಲು ಭಾರತ ಮತ್ತು ಪಾಕಿಸ್ಥಾನ ನಡುವೆ ಕ್ರಿಕೆಟ್‌ ಸರಣಿ ಆಯೋಜಿಸಬೇಕು ಎಂದು ಶೋಯಿಬ್‌ ಅಖ್ತರ್‌ ಪ್ರಸ್ತಾವಿಸಿದ್ದರು. ಇದಕ್ಕೆ ಕಪಿಲ್‌ ದೇವ್‌ ಸಹಿತ ಪ್ರಮುಖರು ದಿಟ್ಟ ಉತ್ತರ ನೀಡಿ ಸರಣಿ ಸಲುವಾಗಿ ಆಟಗಾರರನ್ನು ಅಪಾಯಕ್ಕೆ ತಳ್ಳುವ ಮೂರ್ಖತನದ ಬಗ್ಗೆ ಆಲೋಚಿಸುವುದಿಲ್ಲ ಎಂದು ತಿರುಗೇಟು ನೀಡಿದ್ದರು.

Advertisement

ಇದೀಗ ಈ ಮಾತಿಗೆ ಮಾಜಿ ನಾಯಕ ಸುನಿಲ್‌ ಗಾವಸ್ಕರ್‌ ಕೂಡ ಧ್ವನಿಗೂಡಿಸಿದ್ದಾರೆ. ಇಂಡೋ-ಪಾಕ್‌ ಕ್ರಿಕೆಟ್‌ ಸರಣಿ ನಡೆಯೋದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ಥಾನ ತಂಡಗಳು ಪಾಕ್‌ ನೆಲದಲ್ಲಿ 2012ರ ಬಳಿಕ ಈವರೆಗೆ ಯಾವುದೇ ದ್ವಿಪಕ್ಷೀಯ ಕ್ರಿಕೆಟ್‌ ಸರಣಿ ಆಡಿಲ್ಲ. ಇನ್ನು ಟೆಸ್ಟ್‌ ಸರಣಿ ಆಡಿ ದಶಕವೇ ಕಳೆದಿದೆ ಎಂದರು.

“ಲಾಹೋರ್‌ನಲ್ಲಿ ಹಿಮ ಸುರಿಯಬಹುದು. ಆದರೆ ಭಾರತ-ಪಾಕಿಸ್ಥಾನ ನಡುವೆ ದ್ವಿಪಕ್ಷೀಯ ಕ್ರಿಕೆಟ್‌ ಸರಣಿ ಖಂಡಿತಾ ಸಾಧ್ಯವಿಲ್ಲ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಮುಖಾಮುಖೀ ಆಗಲಿವೆ. ಸದ್ಯಕ್ಕೆ ಕ್ರಿಕೆಟ್‌ ಸರಣಿಯಂತೂ ಖಂಡಿತಾ ಸಾಧ್ಯವಿಲ್ಲ ಎಂದು ಗಾವಸ್ಕರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next