Advertisement

ಯಂಗ್‌ ಇಂಡಿಯಾ ಸಂಸ್ಥೆಯಿಂದ ಅಮೆರಿಕದಲ್ಲಿ ಸತ್ಯಾಗ್ರಹ

10:00 AM Feb 04, 2020 | Hari Prasad |

ವಾಷಿಂಗ್ಟನ್‌: ಇಲ್ಲಿಯ ಭಾರತೀಯ ರಾಯಭಾರ ಕಚೇರಿ ಮುಂದಿನ ಮಹಾತ್ಮ ಗಾಂಧಿ ಪ್ರತಿಮೆಯೆದುರು ಭಾರತ ಮೂಲದ ಅಮೆರಿಕನ್ನರ ಗುಂಪೊಂದು ಸತ್ಯಾಗ್ರಹ ಆರಂಭಿಸಿದ್ದು, ಭಾರತದಂಥ ವೈವಿಧ್ಯಮಯ ದೇಶದಲ್ಲಿ ಬಹುತ್ವದ ಅಗತ್ಯತೆಯನ್ನು ಎತ್ತಿಹಿಡಿದಿದೆ. ಗಾಂಧಿಯ 72ನೇ ಪುಣ್ಯ ಸ್ಮರಣೆ ಅಂಗವಾಗಿ 2 ದಿನಗಳ ‘ಧರಣಿ ಸತ್ಯಾಗ್ರಹ’ವನ್ನು ಯಂಗ್‌ ಇಂಡಿಯಾ ಸಂಸ್ಥೆ ಆಯೋಜಿಸಿತ್ತು.

Advertisement

ನಾವಿಲ್ಲಿ ಮಹಾತ್ಮನ ಸಂದೇಶಗಳನ್ನು ಸಾರಲು ಒಟ್ಟು ಸೇರಿದ್ದೇವೆ. ಪ್ರಪಂಚದ 2 ದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಪ್ರಜಾ ಪ್ರಭುತ್ವದ ಆಶಯಗಳು ದುರ್ಬಲವಾಗಿರುವ ಈ ಸಂದರ್ಭ ದಲ್ಲಿ ಗಾಂಧೀಜಿಯ ಸಂದೇಶಗಳು ಅತಿಮುಖ್ಯವಾಗಿವೆ ಎಂದು ಸಂಸ್ಥೆಯ ಸದಸ್ಯ ರೋಹಿತ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next