Advertisement

ಅಮೆರಿಕ: 60 ಲಕ್ಷ ರೂ. ಖರ್ಚು ಮಾಡಿ ಮನೆ ಎದುರು ಅಮಿತಾಭ್ ಪ್ರತಿಮೆ ನಿರ್ಮಿಸಿದ ಅಭಿಮಾನಿ

08:13 PM Aug 29, 2022 | Team Udayavani |

ಅಮೆರಿಕ: ಬರೋಬ್ಬರಿ 60 ಲಕ್ಷ ರೂ. ಖರ್ಚು ಮಾಡಿ ಮನೆ ಎದುರು ಅಮಿತಾಭ್ ಪ್ರತಿಮೆ ನಿರ್ಮಿಸಿದ ಅಭಿಮಾನಿ

Advertisement

ವಾಷಿಂಗ್ಟನ್‌: ಬಾಲಿವುಡ್‌ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಅವರ ಅಪ್ಪಟ ಅಭಿಮಾನಿಯೊಬ್ಬರು ಅಮೆರಿಕದ ನ್ಯೂಜೆರ್ಸಿಯ ಎಡಿಸನ್‌ ನಗರದಲ್ಲಿರುವ ತಮ್ಮ ಮನೆ ಎದುರು ಅಮಿತಾಭ್‌ರ ಪ್ರತಿಮೆಯನ್ನೇ ಸ್ಥಾಪಿಸಿದ್ದಾರೆ.

ಬರೋಬ್ಬರಿ 60 ಲಕ್ಷ ರೂ. ಖರ್ಚು ಮಾಡಿ ಪ್ರತಿಮೆ ಸ್ಥಾಪಿಸಲಾಗಿದೆ.

1990ರಲ್ಲಿ ಗುಜರಾತ್‌ನಿಂದ ಅಮೆರಿಕಕ್ಕೆ ತೆರಳಿ ಅಲ್ಲಿ ಸೆಕ್ಯುರಿಟಿ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿರುವ ಗೋಪಿ ಸೇಟ್‌ ಮತ್ತು ಅವರ ಪತ್ನಿ ರಿಂಕು ಈ ಪ್ರತಿಮೆ ಸ್ಥಾಪಿಸಿದವರು.

“ಬಿಗ್‌ ಬಿ ನಮಗೆ ದೇವರ ರೀತಿ. ನಿಜ ಜೀವನದಲ್ಲಿಯೂ ಅವರ ನಡೆ ನಮಗೆ ಸಾಕಷ್ಟು ಸ್ಫೂರ್ತಿ ತುಂಬಿದೆ’ ಎಂದಿದ್ದಾರೆ

Advertisement

ಗೋಪಿ. ಇತ್ತೀಚೆಗೆ ಈ ಪ್ರತಿಮೆಯ ಅನಾವರಣ ಕಾರ್ಯಕ್ರಮ ನಡೆದಿದ್ದು, ಅದರಲ್ಲಿ ಸುಮಾರು 600 ಭಾರತೀಯರು ಭಾಗವಹಿಸಿದ್ದರು. ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಅಮಿತಾಭ್‌ ಅವರು ಕುಳಿತುಕೊಂಡಿರುವ ಭಂಗಿಯಲ್ಲಿರುವ ಪ್ರತಿಮೆಯನ್ನು ಗುಜರಾತ್‌ನಲ್ಲಿ ತಯಾರಿಸಲಾಗಿದ್ದು, ಅಲ್ಲಿಂದ ಅಮೆರಿಕಕ್ಕೆ ಕಳುಹಿಸಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next