Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಡಿ.ಕೆ. ಸುರೇಶ್ ಭಾರತವನ್ನು ಒಗ್ಗಟ್ಟಾಗಿ ಇಡಬೇಕು, ದೇಶದ ಅನುದಾನ ಸಮಾನವಾಗಿ ಹಂಚಿಕೆಯಾಗಬೇಕು ಎಂಬ ಹಿತದಿಂದ ಧ್ವನಿ ಎತ್ತಿದ್ದಾರೆ. ಕೇಂದ್ರದಿಂದ ಬರಬೇಕಾಗಿರುವ ನಮ್ಮ ಪಾಲು ಕೇಳುವುದರಲ್ಲಿ ಮತ್ತು ಅದು ನ್ಯಾಯಯುತವಾಗಿ ಸಿಗದೇ ಇದ್ದಾಗ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇಡೀ ಭಾರತ ಒಂದು. ಕಾಂಗ್ರೆಸ್ ಪಕ್ಷ ಭಾರತವನ್ನು ಸದಾ ಒಗ್ಗಟ್ಟಾಗಿ ಇರಿಸಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ನಮ್ಮ ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದರು.
ನಮ್ಮ ರಾಜ್ಯದ ಬಿಜೆಪಿ ನಾಯಕರು ಮತ್ತು ಸಂಸದರು ನಿಜಕ್ಕೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರಿಗೆ ಮಾನ, ಮರ್ಯಾದೆ ಇದೆ ಅನ್ನಿಸುತ್ತದೇನು? ನಮ್ಮ ತೆರಿಗೆ ಪಾಲು ನಮಗೆ ಕೊಡಲು ಮೀನಮೇಷ ಎಣಿಸುವ ಕೇಂದ್ರದ ಧೋರಣೆ ಪ್ರಶ್ನಿಸುವ ಅಥವಾ ಕೊನೆ ಪಕ್ಷ ಪ್ರಧಾನಿ ಬಳಿ ಹೋಗಿ ನೀವು ತೆರಿಗೆ ಪಾಲು ಕೊಡದಿದ್ದರೆ ಕನ್ನಡಿಗರಿಗೆ ಅನ್ಯಾಯ ಆಗುತ್ತದೆ. ಈ ವರ್ಷ ಬರಗಾಲ ಬೇರೆ ಬಿದ್ದಿದೆ. ಹಣ ನೀಡಿದರೆ ಅನುಕೂಲವಾಗಲಿದೆ ಎಂದು ಹೇಳುವಷ್ಟು ಧೈರ್ಯವೂ ಇಲ್ಲ. ಸುಖಾಸುಮ್ಮನೆ ಆರೋಪ ಮಾಡುವುದರಲ್ಲಿ ಯಾವುದೇ ದೊಡ್ಡಸ್ತಿಕೆ ಇಲ್ಲ ಎಂದರು. ಬಿಜೆಪಿಗರಿಗೆ ಮರ್ಯಾದೆ ಇದೆಯಾ?
ನಮ್ಮ ರಾಜ್ಯದ ಬಿಜೆಪಿ ನಾಯಕರು ಮತ್ತು ಸಂಸದರು ನಿಜಕ್ಕೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರಿಗೆ ಮಾನ, ಮರ್ಯಾದೆ ಇದೆ ಅನ್ನಿಸುತ್ತದೇನು? ನಮ್ಮ ತೆರಿಗೆ ಪಾಲು ನಮಗೆ ಕೊಡಲು ಮೀನಮೇಷ ಎಣಿಸುವ ಕೇಂದ್ರದ ಧೋರಣೆ ಪ್ರಶ್ನಿಸುವ ಅಥವಾ ಕೊನೆ ಪಕ್ಷ ಪ್ರಧಾನಿ ಬಳಿ ಹೋಗಿ ನೀವು ತೆರಿಗೆ ಪಾಲು ಕೊಡದಿದ್ದರೆ ಕನ್ನಡಿಗರಿಗೆ ಅನ್ಯಾಯ ಆಗುತ್ತದೆ. ಈ ವರ್ಷ ಬರಗಾಲ ಬೇರೆ ಬಿದ್ದಿದೆ. ಹಣ ನೀಡಿದರೆ ಅನುಕೂಲವಾಗಲಿದೆ ಎಂದು ಹೇಳುವಷ್ಟು ಧೈರ್ಯವೂ ಇಲ್ಲ. ಸುಖಾಸುಮ್ಮನೆ ಆರೋಪ ಮಾಡುವುದರಲ್ಲಿ ಯಾವುದೇ ದೊಡ್ಡಸ್ತಿಕೆ ಇಲ್ಲ ಎಂದರು.
Related Articles
ಸಿಎಂ ಸಿದ್ದರಾಮಯ್ಯ ಕುಂಕುಮ ಇಡುವುದಿಲ್ಲ ಎಂದು ಹೇಳಿದವರ್ಯಾರು? ತಿಲಕ ಇಟ್ಟುಕೊಳ್ಳಲು ಅವರು ಯಾವತ್ತೂ ನಿರಾಕರಿಸಿಲ್ಲ. ದೇವಸ್ಥಾನ, ಕಾರ್ಯಕ್ರಮಗಳಿಗೆ ಹೋದಾಗ ತಿಲಕ ಇಟ್ಟು ಕೊಳ್ಳುತ್ತಾರೆ. ಹಾಗಂತ ಮಹಿಳೆಯರಂತೆ ಹಣೆ ತುಂಬ ಕುಂಕುಮ ಹಚ್ಚಿ ಕೊಳ್ಳುವುದಿಲ್ಲ. ಅಲರ್ಜಿ ಕಾರಣಕ್ಕೆ ತಿಲಕವಿಡಲು ನಿರಾಕ ರಿಸಿರಬಹುದು. ನನಗೆ ಸುಗಂಧರಾಜ ಹೂವು ಅಲರ್ಜಿ ಇದೆ. ಹಾಗಾದರೆ ನಾವು ಹೂವನ್ನು ನಿರಾಕರಿಸಿದಂತಾಗುತ್ತದೋ ಎಂದು ಡಿಕೆಶಿ ಪ್ರಶ್ನಿಸಿದರು.
Advertisement