ಮುಂಬಯಿ: ಬೈಕಂಪಾಡಿ ವಿದ್ಯಾರ್ಥಿ ಸಂಘ ಮುಂಬಯಿ ಮತ್ತು ಮಹಿಳಾ ಸಮಾಜ ಬೈಕಂಪಾಡಿ ಮತ್ತು ಮುಂಬಯಿ ವತಿಯಿಂದ ನಿರ್ಮಾಣಗೊಂಡ ಇಂದಿರಾ ಮಾಧವ ವಿದ್ಯಾರ್ಥಿ ಭವನ ಇದರ ಉದ್ಘಾಟನಾ ಸಮಾರಂಭ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾ ಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಭವನವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದ ಋಣ ತೀರಿಸಬೇಕಾದರೆ ತ್ಯಾಗದ ಮನೋ ಭಾವ ಅಗತ್ಯ. ಆಗ ಸಮಾಜದಲ್ಲಿ ಒಳ್ಳೆಯ ಕೆಲಸ ಕಾರ್ಯಗಳು ನಡೆಯುತ್ತದೆ. ಇದಕ್ಕೆ ಈ ವಿದ್ಯಾರ್ಥಿ ಭವನ ಸಾಕ್ಷಿಯಾಗಿದೆ. ಈ ಭವನ ಕಲೆ, ಸಾಹಿತ್ಯ, ಶುಭಕಾರ್ಯಗಳ ಕೇಂದ್ರವಾಗಲಿ ಎಂದು ಹಾರೈಸಿದರು.
ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ಗ್ರಾಮ ಬೆಳಗಬೇಕಾದರೆ ಅಲ್ಲಿ ಜನಾದìನ ಮಂದಿರ, ಜನತಾ ಮಂದಿರ, ಶಿಕ್ಷಣ ಮಂದಿರ ಆರೋಗ್ಯಕ್ಕಾಗಿ ಆಸ್ಪತ್ರೆ ಇರಬೇಕು. ಬೈಕಂಪಾಡಿಯಲ್ಲಿ ಇದೀಗ ಮೊಗವೀರ ಬಾಂಧವರು, ದಾನಿಗಳು, ಕೈಜೋಡಿಸಿ ವಿದ್ಯಾರ್ಥಿ ಭವನ ನಿರ್ಮಿಸಿ ತಮ್ಮ ಸೇವಾ ಮನೋಭಾವ ತೋರಿಸಿದ್ದಾರೆ ಎಂದು ಅಭಿನಂದಿಸಿದರು.
ಭವನ ನಿರ್ಮಾಣಕ್ಕೆ ಸಹಕರಿಸಿದ ಇಂದಿರಾ ಮಾಧವ ಸಾಲ್ಯಾನ್ ದಂಪತಿ, ಸಂಸದ ನಳಿನ್ ಕುಮಾರ್ ಕಟೀಲು, ಬೈಕಂಪಾಡಿ ಮೊಗವೀರ ಸಭಾದ ಅಧ್ಯಕ್ಷ ವಾಸುದೇವ ಸಾಲ್ಯಾನ್, ದಕ್ಷಿಣ ಕನ್ನಡ ಉಡುಪಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಶುಭಹಾರೈಸಿದರು.
ಬೈಕಂಪಾಡಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಓಂದಾಸ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರುಗಳಾದ ರಾಮ ಎಸ್. ಕರ್ಕೇರ, ಪುರುಷೋತ್ತಮ ಆರ್. ಕೆ., ಮುಂಬಯಿ ಮೊಗವೀರ ಸಭಾದ ಅಧ್ಯಕ್ಷ ವಾಸುದೇವ ಕೋಟ್ಯಾನ್, ಸದಾಶಿವ ಗುರಿಕಾರ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೃಷ್ಣ ಎಲ್. ಬಂಗೇರ, ಮುಂಬಯಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೇಶವ ಕಾಂಚನ್, ಮಹಿಳಾ ಸಮಾಜದ ಗೌರವಾಧ್ಯಕ್ಷೆ ಪ್ರೇಮಾ ವಾಸುದೇವ್, ಅಧ್ಯಕ್ಷೆ ಮೋಹಿನಿ ವಸಂತ್, ಕಥಕ್ ಕಲಾವಿದೆ ಮೀನಾಕ್ಷೀ ರಾಜು ಶ್ರೀಯಾನ್, ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲಾºವಿ, ಮುಂಬಯಿ ಮಹಿಳಾ ಸಮಾಜದ ಅಧ್ಯಕ್ಷ ಸುಮತಿ ಸಾಲ್ಯಾನ್ ಉಪಸ್ಥಿತರಿದ್ದರು.
ಕಟ್ಟಡ ಸಮಿತಿ ಅಧ್ಯಕ್ಷ ರಾಮಚಂದರ್ ಬೈಕಂಪಾಡಿ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಸಂಘದ ಕಾರ್ಯದರ್ಶಿ ನವೀನ್ ಬೈಕಂಪಾಡಿ ಸ್ವಾಗತಿಸಿದರು. ತುಕಾರಾಮ್ ಸಾಲ್ಯಾನ್ ಅವರು ವಂದಿಸಿದರು.