Advertisement

“ಬಡತನ ನಿರ್ಮೂಲನೆಗೆ ಪಣತೊಟ್ಟ ಇಂದಿರಾಗಾಂಧಿ’

07:00 AM Jul 31, 2017 | |

ಬದಿಯಡ್ಕ: ತನ್ನ ಉತ್ತಮ ಆಡಳಿತದಿಂದ ದೇಶ ರಕ್ಷಣೆಗೆ ಮಹತ್ವವನ್ನು ನೀಡಿದ, ಬಡತನ ನಿರ್ಮೂಲನೆಗೆ ಪಣತೊಟ್ಟ ಧೀರ ಮಹಿಳೆಯಾಗಿದ್ದಾರೆ ಇಂದಿರಾಗಾಂಧಿ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಡಿ. ಸತೀಶನ್‌ ಹೇಳಿದರು.

Advertisement

ಅವರು ಪಳ್ಳತ್ತಡ್ಕ ಮುದ್ದು ಮಂದಿರದಲ್ಲಿ ಬದಿಯಡ್ಕ ಮಂಡಲ ಕಾಂಗ್ರೆಸ್‌ ಸಮಿತಿಯ ವತಿಯಿಂದ ಇಂದಿರಾಗಾಂಧಿ ಜನ್ಮಶತಾಬ್ದದ ಅಂಗವಾಗಿ ಬೂತ್‌ ಮಟ್ಟದ ಕುಟುಂಬ ಸಂಗಮ ವನ್ನು ಉದ್ಘಾಟಿಸಿ ಮಾತನಾಡಿದರು.

ಜಾತಿ, ಮತ, ಧರ್ಮದ ಹೆಸರಿನಲ್ಲಿ ಜನರು ಬಡಿದಾಡು ಕೊಳ್ಳುವಂತಾಗಿದೆ. ಬೀಫ್‌ ಹೆಸರಿನಲ್ಲಿ ದೇಶದಲ್ಲಿ ಅನೇಕರ ಕೊಲೆಯಾಗಿದೆ. ತಮ್ಮ ಆಹಾರವನ್ನು ತೀರ್ಮಾನಿಸುವುದು ಯಾವುದೇ ರಾಜಕೀಯ ಪಕ್ಷವಲ್ಲ ಎಂಬುದನ್ನು ಕೇಂದ್ರ ಸರಕಾರ ತಿಳಿಯಬೇಕಿದೆ ಎಂದು ಮೋದಿ ಸರಕಾರವನ್ನು ದೂಷಿಸಿದರು.ಪಿಣರಾಯಿ ಸರಕಾರ ಅಧಿಕಾರಕ್ಕೆ ಬಂದ ನೂರು ದಿನದಲ್ಲೇ ಮೆಡಿಕಲ್‌ ಫೀಸ್‌ ಗಣನೀಯ ಹೆಚ್ಚಳವನ್ನು ಕಂಡಿದೆ.

ಬಡವರಿಗೆ, ರೋಗಿಗಳಿಗೆ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಉಚಿತ ಅಕ್ಕಿ ಲಭಿಸುತ್ತಿತ್ತು. ಅದು ಈಗ ಇಲ್ಲದಾಗಿದೆ. ಆದುದರಿಂದ ಪಕ್ಷವು ಶಕ್ತಿಯುತವಾಗಿ ಪುನಃ ಅಧಿಕಾರಕ್ಕೆ ಬರಲು ಪಕ್ಷವನ್ನು ಸಂಘಟಿಸಬೇಕಾಗಿ ಕರೆಯಿತ್ತರು.

ಪಕ್ಷದ ಬದಿಯಡ್ಕ ಮಂಡಲಾಧ್ಯಕ್ಷ ರಾಮ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯದರ್ಶಿ ಕೆ.ನೀಲಕಂಠನ್‌ ಮಾತನಾಡಿ ಜನನಾಯಕಿ ಇಂದಿರಾ ಗಾಂಧಿ ಅವರು ಕೃಷಿ, ಆರೋಗ್ಯ ಹಾಗೂ ವಿದ್ಯಾಭ್ಯಾಸವನ್ನು ಉನ್ನತ ಮಟ್ಟಕ್ಕೇರಿಸು ವಲ್ಲಿ ಪ್ರಧಾನ ಪಾತ್ರವಹಿಸಿರುತ್ತಾರೆ. ಕಾಂಗ್ರೆಸ್‌ ಪಕ್ಷವು ಎಲ್ಲ ಮತದವರನ್ನೂ ಒಂದುಗೂಡಿಸಿ ಆಡಳಿತ ನಡೆಸಿದೆ. 

Advertisement

ವಿದೇಶದಲ್ಲಿರುವ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ವರ್ಗಾಯಿಸುವೆ ಎಂದ ಮೋದಿ ಸರಕಾರ ಇಂದು ಏನು ಮಾಡಿದೆ? ಕೇರಳದಲ್ಲಿ ಬಿಜೆಪಿ ಅಧಿಕಾರವಿಲ್ಲದೆ ಸಾವಿರ ಕೋಟಿ ಹಗರಣದಲ್ಲಿ ಭಾಗಿಯಾಗಿದೆ. ಅಧಿಕಾರದಲ್ಲಿದ್ದರೆ ಏನಾಗುತ್ತಿತ್ತೋ? ನಮ್ಮ ಪ್ರಧಾನ ಎದುರಾಳಿ ಬಿಜೆಪಿಯನ್ನು ಎದುರಿಸಲು ನಾವೆಲ್ಲ ಒಗ್ಗಟ್ಟಿನಿಂದ ಹೋರಾಡಬೇಕಿದೆ. ಪಿಣರಾಯಿ ಸರಕಾರವು ಸಂಪೂರ್ಣ ವಿಫಲವಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹಕೀಂ ಕುನ್ನಿಲ್‌, ಕಾರ್ಯದರ್ಶಿ ಗಳಾದ ಎಂ.ಕುಞಂಬು ನಂಬಿಯಾರ್‌, ವಿ.ಕೆ. ಫೆ„ಸಲ್‌, ದಲಿತ್‌ ಕಾಂಗ್ರೆಸ್‌ ಜಿಲ್ಲಾ ಕಾರ್ಯದರ್ಶಿ ಐತ್ತಪ್ಪ ಚೆನ್ನೆಗುಳಿ, ಕಾರಡ್ಕ ಬ್ಲೋಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಪಿ.ಜಿ.ಚಂದ್ರಹಾಸ ರೈ, ಕಾರ್ಯದರ್ಶಿಗಳಾದ ಶ್ಯಾಮಪ್ರಸಾದ್‌ ಮಾನ್ಯ, ಖಾದರ್‌ ಮಾನ್ಯ, ಗ್ರಾಮಪಂಚಾಯತ್‌ ಅಧ್ಯಕ್ಷ ಕೆ.ಎನ್‌.ಕೃಷ್ಣ ಭಟ್‌, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಕಾರ್ಯದರ್ಶಿ ಜಯಶ್ರೀ, ನೇತಾರರಾದ ಐತ್ತಪ್ಪ ಪಟ್ಟಾಜೆ, ಅನಿತಾ ಕ್ರಾಸ್ತಾ, ಪ್ರಸನ್ನ, ತಿರುಪತಿ ಕುಮಾರ ಭಟ್‌, ಪಿ. ಜಗನ್ನಾಥ ರೈ, ಅಬೂಬಕ್ಕರ್‌ ಅಬ್ಟಾಸ್‌ ಮೊದಲಾದವರು ಉಪಸ್ಥಿತರಿದ್ದರು. ಬೂತ್‌ ಮಟ್ಟದ ಹಿರಿಯ ಕಾಂಗ್ರೆಸ್‌ ಕಾರ್ಯಕರ್ತರನ್ನು ಶಾಲು ಹೊದೆಸಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next