Advertisement
ನಗರದ ಬಡವರು ಹಾಗೂ ಶ್ರಮಿಕರಿಗೆ ಕಡಿಮೆ ದರದಲ್ಲಿ ಊಟ ಮತ್ತು ತಿಂಡಿ ಒದಗಿಸಲು ಆರಂಭಿಸಿರುವ ಇಂದಿರಾ ಕ್ಯಾಂಟಿನ್ ಎಲ್ಲ 198 ವಾರ್ಡ್‌ಗಳಲ್ಲಿ ಆರಂಭಿಸಲು ಮುಖ್ಯಮಂತ್ರಿಗಳು ನೀಡಿದ್ದ ಗಡವು ಮುಗಿದಿದೆ. ಈಗಾಗಲೇ 151 ಕಡೆಗಳಲ್ಲಿ ಕ್ಯಾಂಟೀನ್‌ಗಳು ಉದ್ಘಾಟನೆಗೆ ಸಿದ್ಧವಾಗಿವೆ. ಆದರೆ, ಸಚಿವರು ಹಾಗೂ ಶಾಸಕ ದಿನಾಂಕಗಳು ದೊರೆಯದ ಹಿನ್ನೆಲೆಯಲ್ಲಿ ಕ್ಯಾಂಟೀನ್‌ಗಳಲ್ಲಿ ಆಹಾರ ವಿತರಣೆ ಆರಂಭವಾಗಿಲ್ಲ.
Related Articles
Advertisement
ಖಾಸಗಿ ಜಾಗ ಪಡೆಯಲು ಸಿದ್ಧತೆ: ಕ್ಯಾಂಟೀನ್ ನಿರ್ಮಾಣಕ್ಕೆ ಕೆಲವೊಂದು ವಾರ್ಡ್‌ಗಳಲ್ಲಿ ಜಾಗ ದೊರೆಯದ ಹಿನ್ನೆಲೆಯಲ್ಲಿ ಈಗಾಗಲೇ ಬೆಸ್ಕಾಂ, ಆರೋಗ್ಯ, ಶಿಕ್ಷಣ, ಸಾರಿಗೆ, ಜಲಮಂಡಳಿ, ಬಿಡಿಎ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳಿಂದ ಜಾಗ ಪಡೆಯಲಾಗಿದೆ. ಆ ನಡುವೆಯೂ ಜಾಗ ದೊರೆಯದ ಹಿನ್ನೆಲೆಯಲ್ಲಿ ಕೆಲವೊಂದು ಕಡೆಗಳಲ್ಲಿ ಖಾಸಗಿ ಜಾಗವನ್ನು ಪಡೆಯಲು ತೀರ್ಮಾನಿಸಲಾಗಿದೆ.
ರಾಜ್ಯೋತ್ಸವಕ್ಕೆ ಹಲವು ಕ್ಯಾಂಟೀನ್‌ಗಳು ಉದ್ಘಾಟನೆ: ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಈಗಾಗಲೇ ಕಾಮಗಾರಿ ಪೂರ್ಣ ಗೊಂಡಿರುವ ಹಲವು ವಾರ್ಡ್‌ಗಳಲ್ಲಿನ ಇಂದಿರಾ ಕ್ಯಾಂಟೀನ್‌ಗಳನ್ನು ಸಚಿವರು ಹಾಗೂ ಶಾಸಕರು ಬುಧವಾರ ಉದ್ಘಾಟಿಸಿದರು. ಶಂಕರಾಂಬರಿನಗರ, ಸುಧಾಮನಗರ, ಕಾಮಾಕ್ಷಿನಗರ, ಮಾರುತಿ ಸೇವಾ ನಗರ, ಅರಮನೆ ನಗರ, ಕೋನೆನ ಅಗ್ರಹಾರ ಸೇರಿದಂತೆ ಹಲವು ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ಉದ್ಘಾಟನೆಗೊಂಡಿದೆ.