Advertisement
ಆರಂಭ:
Related Articles
Advertisement
ಅವಘಡ:
ಮಳೆನೀರು ಸೋರಿದ್ದರಿಂದಾ ಗಿ ವಯರಿಂಗ್ ಮೇಲೆ ಪರಿ ಣಾಮ ಬೀರಿದೆ. ಎಲೆಕ್ಟ್ರಿಕ್ ಉಪಕರಣಗಳು ಸುಟ್ಟು ಹೋಗಿವೆ. ಪ್ಲಗ್ ಪಾಯಿಂಟ್‌ಗಳಲ್ಲಿ ಶಾಕ್ ಬರುತ್ತಿದೆ. ಬಲ್ಬ್ಗಳು ಕೂಡ ಉರಿಯದ ಸ್ಥಿತಿಗೆ ಬಂದಿದೆ. ರಾಜ್ಯ ಸರಕಾರ ಇದನ್ನು ಪ್ರತ್ಯೇಕ ಯೋಜನೆಯಾಗಿ ನಿರ್ಮಿಸಿದ್ದರೂ ಸ್ಥಳ ನೀಡಬೇಕಾದ್ದು, ನಿರ್ವಹಣೆ ಮಾಡಬೇಕಾದ್ದು ಸ್ಥಳೀಯ ಸಂಸ್ಥೆ. ಆದ್ದರಿಂದ ಈಗ ಇದರ ದುರಸ್ತಿ ಹೊಣೆ ಪುರಸಭೆ ಹೆಗಲಿಗೇರಿದೆ.
ಎಲ್ಲ ಕಡೆಯೂ ನೀರು :
ಮೂರು ವರ್ಷವೂ ಭರ್ತಿಯಾಗದ ಈ ಕಟ್ಟಡ ಈಗಲೇ ಸೋರುತ್ತಿದೆ. ಇದು ಇಲ್ಲೇ ಇಟ್ಟಿಗೆ ಸಿಮೆಂಟ್‌ನಿಂದ ನಿರ್ಮಿಸಿದ ಕಟ್ಟಡವೇನೂ ಅಲ್ಲ. ಸಿಮೆಂಟ್‌ನಿಂದ ತಯಾರಿಸಿದ ಸಿದ್ಧ ಶೀಟ್‌ಗಳನ್ನೇ ಗೋಡೆ, ಮಾಡುಗಳನ್ನಾಗಿ ಮಾಡಿ ತಯಾರಿಸಿದ ರಾಜ್ಯಾದ್ಯಂತ ಇರುವ ಒಂದೇ ಮಾದರಿಯ ಕಟ್ಟಡ. ಶೀಟ್‌ಗಳನ್ನು ಜೋಡಿಸಿದ ಭಾಗದಲ್ಲಿ ಮಳೆ ಬಂದಾಗ ನೀರು ಕ್ಯಾಂಟೀನ್ ಒಳಗೆ ಒಸರುತ್ತದೆ. ಹಾಗೆ ಸೋರಿದ ನೀರು ಊಟ ಕೊಡುವ ಜಾಗ, ಊಟ ಮಾಡುವ ಜಾಗ, ಅಡುಗೆ ಸಿದ್ಧಪಡಿಸುವ ಪ್ರದೇಶ ಎಂದು ಭೇದ ಮಾಡದೇ ಎಲ್ಲ ಕಡೆಯೂ ನಿಂತಿರುತ್ತದೆ. ಊಟ ನೀಡುತ್ತಿರುವಾಗಲೇ ಅದರ ಮೇಲೆ ಮಳೆ ನೀರು ಸೋರಿದ್ದೂ ಉಂಟು ಎನ್ನುತ್ತಾರೆ ಕ್ಯಾಂಟೀನ್‌ನ ಮೇಲ್ವಿಚಾರಕರು.
ಇಂದಿರಾ ಕ್ಯಾಂಟೀನ್ ಸೋರುತ್ತಿರುವುದು ಗಮನಕ್ಕೆ ಬಂದಿದೆ. ಆಡಳಿತ ಮಂಡಳಿಯ ಗಮನಕ್ಕೂ ತರಲಾಗಿದೆ. ದುರಸ್ತಿಗೆ 1.5 ಲಕ್ಷ ರೂ.ಗಳ ಅಂದಾಜುಪಟ್ಟಿಗೆ ಸಾಮಾನ್ಯ ಸಭೆ ಅನುಮೋದನೆ ನೀಡಿದೆ. ಲೀಕ್‌ಪ್ರೂಫ್, ವಯರಿಂಗ್ ದುರಸ್ತಿಯನ್ನು ಈ ಮೂಲಕ ಮಾಡಿಸಲಾಗುವುದು.-ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ