Advertisement

ಇಂದಿರಾ ಕ್ಯಾಂಟೀನ್‌ಗೆ ಒಂದು ವರ್ಷದ ಸಂಭ್ರಮ

12:58 PM Aug 16, 2018 | |

ಬೆಂಗಳೂರು: ನಗರದ ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಮಾಡುತ್ತಿರುವ ಇಂದಿರಾ ಕ್ಯಾಂಟೀನ್‌ ಯೋಜನೆ ಅನುಷ್ಠಾನಗೊಂಡು ವರ್ಷ ಕಳೆದಿದ್ದು, ಒಂದು ವರ್ಷದಲ್ಲಿ ಆರು ಕೋಟಿ ಜನರಿಗೆ ಆಹಾರ ಪೂರಕೆ ಮಾಡಿದ ಕೀರ್ತಿಗೆ ಕ್ಯಾಂಟೀನ್‌ಗಳಿಗೆ ಸೇರಿದೆ.

Advertisement

ರಾಜ್ಯ ಸರ್ಕಾರದ 2017-18ನೇ ಸಾಲಿನ ಬಜೆಟ್‌ನಲ್ಲಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ಅದರಂತೆ ಪಾಲಿಕೆಯ ವ್ಯಾಪ್ತಿಯಲ್ಲಿ ಸದ್ಯ ಒಟ್ಟು 171 ಇಂದಿರಾ ಕ್ಯಾಂಟೀನಗಳು ಹಾಗೂ 17 ಸಂಚಾರಿ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ನಿತ್ಯ ಸುಮಾರು 2 ಲಕ್ಷ ಮಂದಿಗೆ ಆಹಾರ ಪೂರೈಸುತ್ತಿವೆ. 

ಇದರೊಂದಿಗೆ ಜನರನ್ನು ತನ್ನತ್ತ ಸೆಳೆಯುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್‌ಗಳ ಮೆನು ಸಹ ಬದಲಾವಣೆ ಮಾಡಲಾಗಿದೆ. ಜತೆಗೆ ಕೆಲವು ಕ್ಯಾಂಟೀನ್‌ಗಳಲ್ಲಿ ಪ್ರಾಯೋಗಿಕವಾಗಿ ಮುದ್ದೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಕಾಫಿ-ಟೀ ಸಹ ನೀಡಲು ಯೋಜನೆ ರೂಪಿಸಲಾಗಿದೆ. 

ಇಂದಿರಾ ಕ್ಯಾಂಟೀನ್‌ ಸಾಗಿ ಬಂದ ಹಾದಿ: ಮುಖ್ಯಮಂತ್ರಿಗಳು 2017-18ನೇ ಬಜೆಟ್‌ನಲ್ಲಿ ಇಂದಿರಾ ಕ್ಯಾಂಟೀನ್‌ ಘೋಷಿಸಿದ್ದರು. ಅದರಂತೆ 2018ರ ಆ.16ರಂದು 101 ಕ್ಯಾಂಟೀನ್‌ಗಳಿಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಚಾಲನೆ ನೀಡಿದ್ದರು. ಆ ನಂತರದಲ್ಲಿ ಗಾಂಧಿ ಜಯಂತಿ 50 ಕ್ಯಾಂಟೀನ್‌ಗಳು ಹಾಗೂ ಜನವರಿ ವೇಳೆ 23 ಕ್ಯಾಂಟೀನ್‌ಗಳು ಸಾರ್ವಜನಿಕರಿಗೆ ಲಭ್ಯವಾಗಿದ್ದವು. 

ಆದರೆ, ಪಾಲಿಕೆಯ 17 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳನ್ನು ನಿರ್ಮಿಸಲು ಜಾಗ ದೊರೆಯದ ಹಿನ್ನೆಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾದನ ಸಂಚಾರಿ ಮೊಬೈಲ್‌ ಕ್ಯಾಂಟೀನ್‌ಗಳನ್ನು ಪಾಲಿಕೆಯಿಂದ ಪರಿಚಯಿಸಲಾಗಿತ್ತು. ಅದರಂತೆ ಜನವರಿ 26ರಂದು 24 ಮೊಬೈಲ್‌ ಇಂದಿರಾ ಕ್ಯಾಂಟೀನ್‌ಗಳಿಗೆ ಚಾಲನೆ ನೀಡಲಾಗಿತ್ತಾದರೂ, ಸದ್ಯ 17 ಸಂಚಾರಿ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. 

Advertisement

ಸೈನಿಕರಿಂದ ಕ್ಯಾಂಟೀನ್‌ಗಳಲ್ಲಿ ಶಿಸ್ತು: ಇಂದಿರಾ ಕ್ಯಾಂಟೀನ್‌ ಯೋಜನೆಗಳು ಜಾರಿಗೊಳಿಸಿದ ಬಳಿಕ ಕೆಲವೊಂದು ವಾರ್ಡ್‌ಗಳಲ್ಲಿ ಕ್ಯಾಂಟೀನ್‌ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಗಳು ನಡೆದಿದ್ದವು. ಜತೆಗೆ ಕ್ಯಾಂಟೀನ್‌ ಸಿಬ್ಬಂದಿ ಆಹಾರ ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲವೆಂಬ ದೂರುಗಳು ಕೇಳಿಬಂದಿದ್ದವು. ಆ ಹಿನ್ನೆಲೆಯಲ್ಲಿ ಪಾಲಿಕೆಯ ಪ್ರತಿಯೊಂದು ಕ್ಯಾಂಟೀನ್‌ಗೂ ಮಾರ್ಷಲ್‌ ನೇಮಿಸುವ ಮೂಲಕ ಶಿಸ್ತು ತರಲಾಗಿತ್ತು. 

ಯಾವುದೇ ಆಹಾರ ಸರಬರಾಜು ಹಾಗೂ ವಿತರಣೆ ಅನುಭವವಿಲ್ಲದಿದ್ದರೂ ಯಶಸ್ವಿಯಾಗಿ ಒಂದು ವರ್ಷ ಕ್ಯಾಂಟೀನ್‌ಗಳನ್ನು ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರಲಾಗುವುದು. 
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತರು

2017ರ ಆ.16 ರಿಂದ ಇಲ್ಲಿವರೆಗೆ
-6 ಕೋಟಿ ಮಂದಿ ಊಟ, ತಿಂಡಿ ಸೇವಿಸಿದವರು 
-2.15 ಲಕ್ಷ ಮಂದಿ  ಪ್ರತಿ ದಿನ ಊಟ, ತಿಂಡಿ ಸೇವಿಸಿದವರು-  
-1,200 ಸರಾಸರಿ ಜನ ಒಂದು ಕ್ಯಾಂಟೀನ್‌ನಲ್ಲಿ ಊಟ, ತಿಂಡಿ ಮಾಡಿದವರು- 
-20 ಕೇಂದ್ರೀಕೃತ ಅಡುಗೆ ಮನೆಗಳು
-24 ಮೊಬೈಲ್‌ ಕ್ಯಾಂಟೀನ್‌ಗಳು

Advertisement

Udayavani is now on Telegram. Click here to join our channel and stay updated with the latest news.

Next