Advertisement

ಇಂದಿರಾ ಕ್ಯಾಂಟೀನ್‌ ವಿಸ್ತರಣೆ; 25 ರೂ.ಗೆ ಮೂರು ಹೊತ್ತು ಊಟ

06:00 AM Aug 17, 2017 | |

ಬೆಂಗಳೂರು: ಇನ್ನು ಕಿಸೆಯಲ್ಲಿ 25 ರೂ. ಇದ್ದರೆ ಸಾಕು, ಬೆಂಗಳೂರಿನಲ್ಲಿ ಮೂರು ಹೊತ್ತು ಊಟಕ್ಕೆ ಮೋಸ ಇಲ್ಲ. ಇದು ಚುನಾ ವಣೆಯ ಹೊಸ್ತಿಲಲ್ಲಿರುವಾಗ ರಾಜ್ಯ ಸರ್ಕಾರ ಆರಂಭಿಸಿದ “ಇಂದಿರಾ ಕ್ಯಾಂಟೀನ್‌’ ಫ‌ಲಶ್ರುತಿ. ನಗರದಲ್ಲಿ ಬಡ ಹಾಗೂ ಕೆಳ ಮಧ್ಯಮ ವರ್ಗ ದವರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕ್ಯಾಂಟೀನ್‌ ಯೋಜನೆ ಯನ್ನು ಬುಧವಾರ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಉದ್ಘಾ ಟಿಸಿದರು. ಹಾಗೆಯೇ ಅದೇ ಕ್ಯಾಂಟಿನ್‌ನಲ್ಲಿ ಹತ್ತು ರೂ. ಕೊಟ್ಟು ಊಟವನ್ನೂ ಮಾಡಿದರು.

Advertisement

ಆರಂಭಿಕ ಹಂತದಲ್ಲಿ 101 ಕ್ಯಾಂಟೀನ್‌ಗಳು ಬುಧವಾರ ಆರಂಭವಾಗಿದ್ದು, 1.5 ಲಕ್ಷ ಮಂದಿ ನಿತ್ಯ ಹೊಟ್ಟೆ ತುಂಬಿಸಿಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇಲ್ಲಿ ಬೆಳಗಿನ ತಿಂಡಿ 5 ರೂ., ಮಧ್ಯಾಹ್ನ ಮತ್ತು ರಾತ್ರಿಯ ಊಟ 10 ರೂ.ಗಳಿಗೆ ದೊರೆಯಲಿದೆ. ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ಕಾರ್ಯಕ್ರಮದ ಉದ್ಘಾಟನಾ ಸಮಾ ರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಕ್ಯಾಂಟೀನ್‌ಗೆ ಚಾಲನೆ ನೀಡಿದ ರಾಹುಲ್‌ ಗಾಂಧಿ ಮಾತನಾಡಿ, “”ಎಲ್ಲರಿಗೂ ಊಟ ಕೊಡು ವುದು ನನ್ನ ಅಜ್ಜಿ ಕನಸು ಕೂಡ. ಬೆಂಗಳೂರಿಗೆ ನೂರಾರು ಕನಸು ಹೊತ್ತು, ಬರುವ ಜನರಿಗೆ ಈ ಆಹಾರ ಯೋಜನೆ ಸಹಾಯಕವಾಗಲಿದೆ.

ಆದರೆ, ಕೆಲ ವರಿಗೆ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾ ಗದಂಥ ಪರಿಸ್ಥಿತಿ ಇರುತ್ತದೆ. ಅಂತಹವರಿಗೆ ಕಡಿಮೆ ದರದಲ್ಲಿ
ತಿಂಡಿ-ಊಟ ನೀಡಲು ಯೋಜನೆ ಜಾರಿಗೊಳಿಸಿದ್ದು, ನಗರದ ಯಾವೊಬ್ಬ ವ್ಯಕ್ತಿಯೂ ಹಸಿವಿನಿಂದಿರಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ” ಎಂದರು.

ದೊಡ್ಡ ಮನೆಗಳು, ಕಾರುಗಳನ್ನು ಹೊಂದಿರುವವರಿಗೆ ಊಟ ದೊಡ್ಡ ವಿಷಯವಾಗುವುದಿಲ್ಲ. ಅವರು ರೆಸ್ಟೋರೆಂಟ್‌ ಹೋಗಿ ಅಥವಾ ತಮಗೆ ಬೇಕಾದದ್ದನ್ನು ಮನೆಯಿಂದಲೇ ಮಾಡಿಕೊಂಡುಬಂದು ತಿನ್ನುತ್ತಾರೆ.

Advertisement

ಆದರೆ, ಬೆಂಗಳೂರಿನಲ್ಲಿರುವ ಲಕ್ಷಾಂತರ ಜನರು ಕಟ್ಟಡ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಆಟೋ ಚಾಲಕರು, ದಿನ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಹಣ ದೊರೆಯುವುದಿಲ್ಲ. ಅಂತವರನ್ನು ಗುರಿಯಾಗಿಸಿಕೊಂಡು ಯೋಜನೆ
ಜಾರಿಗೊಳಿಸಿದ್ದೇವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ರಾಜಕೀಯ ಉದ್ದೇಶದಿಂದ ಜಾರಿಗೊಳಿಸಲಾಗಿದೆ ಎಂದು ಕೆಲವರು ಆರೋಪಿಸುತ್ತಾರೆ. ಆದರೆ, ಎರಡು ಹೊತ್ತಿನ ಊಟ ಮಾಡಲಾಗದವರು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಬುಧವಾರ ಬೆಂಗಳೂರಿನ 101 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ಉದ್ಘಾಟನೆಗೊಂಡಿದ್ದು, ಕ್ಯಾಂಟೀನ್‌ಗಳಲ್ಲಿ ಬೆಳಗಿನ ಉಪಹಾರ ಸೋಮವಾರದಿಂದ ಭಾನುವಾರದವರೆಗೆ ಇಡ್ಲಿಯ ಜತೆಗೆ ಕ್ರಮವಾಗಿ ಪುಳಿಯೋಗರೆ – ಖಾರಾಬಾತ್‌ -ಪೊಂಗಲ್‌ – ರವಾ ಕಿಚಡಿ – ಚಿತ್ರಾನ್ನ -ವಾಂಗಿಬಾತ್‌ – ಖಾರಾಬಾತ್‌ ಮತ್ತು ಕೇಸರಿಬಾತ್‌ ದೊರೆಯಲಿದೆ. ಉಳಿದಂತೆಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಸಾಮಾನ್ಯವಾಗಿ ಅನ್ನ-ಸಾಂಬಾರ್‌ ಹಾಗೂ ಮೊಸರನ್ನದೊಂದಿಗೆ ಕ್ರಮವಾಗಿ ಟೊಮೆಟೋಬಾತ್‌, ಚಿತ್ರಾನ್ನ, ವಾಂಗಿಬಾತ್‌, ಬಿಸಿಬೇಳೆಬಾತ್‌, ಮೆಂತ್ಯೆಪಲಾವ್‌, ಪುಳಿಯೋಗರೆ ಹಾಗೂದರ್ಶಿನಿ ಪಲಾವ್‌ ನೀಡಲಾಗುತ್ತದೆ.

ಬೆಳಗ್ಗೆ 7.30ರಿಂದ 10 ಗಂಟೆಯವರಿಗೆ ಬೆಳಗಿನ ತಿಂಡಿ, ಮಧ್ಯಾಹ್ನ 12.30ರಿಂದ 3 ಗಂಟೆವರೆಗೆ ಮತ್ತು ರಾತ್ರಿ 7.30 ರಿಂದ 9 ಗಂಟೆವರೆಗೆ ಊಟ ವಿತರಿಸಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಮಾಡುವ ಮನ್‌ ಕಿ ಬಾತ್‌ ರೈತರು, ಬಡವರ ಪರವಾಗಿರುವುದಿಲ್ಲ. ಕಪು ಹಣ ತರುತ್ತೇವೆ, ಭ್ರಷ್ಟಾಚಾರ ನಿಗ್ರಹಿಸುತ್ತೇವೆ ಎಂದು ಮನ್‌ ಕಿ ಬಾತ್‌ ಮಾಡುತ್ತಲೇ ಇರುತ್ತಾರೆ.ಅವರದು ಮನ್‌ ಕಿ ಬಾತ್‌ ಆದರೆ, ನಮ್ಮದು ವಾಂಗಿ ಬಾತ್‌. ಜನರ ಹೊಟ್ಟೆ ತುಂಬಿಸುವ ಕೆಲಸ ನಮ್ಮದು. 
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next