Advertisement

ಬೆಂಗಳೂರಿನಿಂದ ವಾರಾಣಸಿಗೆ ತೆರಳುತ್ತಿದ್ದ IndiGo ವಿಮಾನ ಹೈದರಾಬಾದ್ ನಲ್ಲಿ ತುರ್ತುಭೂಸ್ಪರ್ಶ

12:16 PM Apr 04, 2023 | Team Udayavani |

ಹೈದರಾಬಾದ್: ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ವಾರಾಣಸಿಗೆ ಹೊರಟಿದ್ದ ಇಂಡಿಗೋ ವಿಮಾನ(6E897)ವನ್ನು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಮಂಗಳವಾರ (ಎ.04) ಬೆಳಗ್ಗೆ ನಡೆದಿದೆ.

Advertisement

ಇದನ್ನೂ ಓದಿ:ಶ್ರೀ ನಂಜುಂಡೇಶ್ವರನ ಶಾಪ ತಟ್ಟದೆ ಇರದು..: ಬಿಜೆಪಿ ಶಾಸಕನ ವಿರುದ್ಧ ಎಚ್ ಡಿಕೆ ವಾಗ್ದಾಳಿ

137 ಪ್ರಯಾಣಿಕರಿದ್ದ ಇಂಡಿಗೋ ವಿಮಾನ ಮಂಗಳವಾರ ಬೆಳಗ್ಗೆ 6-15ಕ್ಕೆ ಹೈದರಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು ಎಂದು ವರದಿ ತಿಳಿಸಿದೆ.

ತಾಂತ್ರಿಕ ದೋಷ ಕಂಡು ಬಂದ ಪರಿಣಾಮ ವಾರಾಣಸಿಗೆ ತೆರಳುತ್ತಿದ್ದ ವಿಮಾನವನ್ನು ಹೈದರಾಬಾದ್ ವಿಮಾನ ನಿಲ್ದಾಣದತ್ತ ಡೈವರ್ಟ್ ಮಾಡಲಾಗಿದೆ ಎಂದು ಡಿಜಿಸಿಎ ತಿಳಿಸಿದ್ದು, ಈ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next