Advertisement

Indigo ಪ್ರಯಾಣ ಇನ್ನು ಅಗ್ಗ: ಇಂಧನ ಶುಲ್ಕ ಕೈಬಿಟ್ಟ ಸಂಸ್ಥೆ

08:46 PM Jan 04, 2024 | Pranav MS |

ನವದೆಹಲಿ: ಪ್ರಯಾಣಿಕರಿಂದ ಸಂಗ್ರಹಿಸುತ್ತಿದ್ದ ಇಂಧನ ಶುಲ್ಕವನ್ನು ಇನ್ನು ಮುಂದೆ ಸಂಗ್ರಹಿಸುವುದಿಲ್ಲ ಎಂದು ದೇಶದ ಅತಿದೊಡ್ಡ ಏರ್‌ಲೈನ್‌ ಇಂಡಿಗೋ ಗುರುವಾರ ಘೋಷಿಸಿದೆ. ಇದರಿಂದ ವಿಮಾನ ಟಿಕೆಟ್‌ ದರದಲ್ಲಿ 1,000 ರೂ. ವರೆಗೆ ಕಡಿತವಾಗಲಿದೆ. ವೈಮಾನಿಕ ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ 2023ರ ಅ.6ರಿಂದ ದೇಶೀಯ ಮತ್ತು ವಿದೇಶಿ ಟಿಕೆಟ್‌ ದರದ ಮೇಲೆ ಹೆಚ್ಚುವರಿ ಯಾಗಿ ಇಂಧನ ದರವನ್ನೂ ಸಂಸ್ಥೆ ವಿಧಿಸುತಿತ್ತು.

Advertisement

\ದೂರದ ಆಧಾರದಲ್ಲಿ ಹೆಚ್ಚುವರಿಯಾಗಿ 300 ರೂ.ಗಳಿಂದ 1,000ರೂ.ವರೆಗೆ ದರ ವಿಧಿಸುತ್ತಿತ್ತು. ಈಗ ವೈಮಾನಿಕ ಇಂಧನ ಬೆಲೆ ತಗ್ಗಿರುವ ಹಿನ್ನೆಲೆಯಲ್ಲಿ ಜ.4ರಿಂದ ಅನ್ವಯವಾಗುವಂತೆ ಇಂಧನ ಶುಲ್ಕವನ್ನು ಏರ್‌ಲೈನ್ಸ್‌ ಹಿಂಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next