ಹೊಸದಿಲ್ಲಿ: ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಸೆಪ್ಟೆಂಬರ್ ತ್ತೈಮಾಸಿಕ ವರದಿ ಬಿಡುಗಡೆ ಮಾಡಿದ್ದು, ಅಧಿಕ ಮಟ್ಟದ ನಷ್ಟ ಅನುಭವಿಸಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದೆ.
ಅಧಿಕ ಖರ್ಚು ಹಾಗೂ ಹವಮಾನದ ಏರಿಳಿತ ಈ ಬೆಳವಣಿಗೆಗೆ ಮುಖ್ಯ ಕಾರಣವಾಗಿದ್ದು, ಪ್ರಯಾಣಿಕರು ವಿಮಾನಯಾನದಿಂದ ದೂರ ಉಳಿದಿದ್ದಾರೆ ಎಂದು ತಿಳಿಸಿದೆ.
ಸೆಪ್ಟೆಂಬರ್ 30 ರ ಮೊದಲ ಮೂರು ತಿಂಗಳಲ್ಲಿ ಇಂಟರ್ ಗ್ಲೋಬ್ ಏವಿಯೇಷನ್ ಲಿಮಿಟೆಡ್ 1,066 ಕೋಟಿ ರೂ.ವರೆಗೆ ನಿವ್ವಳ ನಷ್ಟವನ್ನು ಕಂಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 652 ಕೋಟಿ ರೂ ನಷ್ಟ ಅನುಭವಿಸಿತ್ತು ಎಂದು ಹೇಳಲಾಗಿದೆ.
ಪ್ರಸಕ್ತ ಸಾಲಿನಲ್ಲಿ ವೆಚ್ಚದಲ್ಲಿ ಶೇ.27.6 ರಷ್ಟು ಏರಿಕೆಯಾಗಿದ್ದು, 9,577 ರೂ.ಕೋಟಿ ಗೆ ತಲುಪಿದೆ. ಇದರೊಂದಿಗೆ ವಿಮಾನ ದುರಸ್ತಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ವೆಚ್ಚಗಳು ಸುಮಾರು 153 ರೂ. ಕೋಟಿಗೆ ದ್ವಿಗುಣಗೊಂಡಿವೆ.
ಕಾರ್ಪೊರೆಟ್ ವಲಯದಲ್ಲಿ ಆಡಳಿತ ವಿಚಾರಗಳಿಗಾಗಿ ಇಂಡಿಗೊ ಸಹ-ಸಂಸ್ಥಾಪಕ ರಾಕೇಶ್ ಗಂಗ್ವಾಲ್ ಮತ್ತು ರಾಹುಲ್ ಭಾಟಿಯಾ ನಡುವೆ ಜಟಾಪಟಿ ನಡೆಯುತ್ತಿದ್ದು, ಸಂಸ್ಥೆಯ ಹಿನ್ನಡೆಗೆ ಕಾರಣವಾಗಿದೆ ಎಂದು ಕೆಲ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.