Advertisement

ಟೇಕ್-ಆಫ್ ಆಗುವ ಮುನ್ನ ಇಂಡಿಗೋ ವಿಮಾನದ ಇಂಜಿನ್‌ ಗೆ ಬೆಂಕಿ: VIDEO

09:14 AM Oct 29, 2022 | Team Udayavani |

ಹೊಸದಿಲ್ಲಿ: ಇಂಡಿಗೋ ವಿಮಾನವೊಂದು ಬೆಂಗಳೂರಿಗೆ ಟೇಕಾಫ್ ಆಗುವ ಕೆಲವೇ ಸೆಕೆಂಡುಗಳ ಮೊದಲು ಅದರ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

Advertisement

ಇಂಡಿಗೋ 6E-2131 ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಏರ್‌ಬಸ್ ಎ-320 ವಿಮಾನದಲ್ಲಿ 184 ಮಂದಿ ಇದ್ದರು.

ಇದನ್ನೂ ಓದಿ:ಖಾತೆಯಲ್ಲಿ 1 ಕೋ.ರೂ. ಇದೆಯಾ? ಇಂಡೋನೇಷ್ಯಾ ಸೆಕೆಂಡ್‌ ವೀಸಾಗೆ ಅರ್ಜಿ ಹಾಕಿ!

ರಾತ್ರಿ 9:45ರ ಸುಮಾರಿಗೆ ಈ ಘಟನೆ ನಡೆದಿದ್ದು, ಪ್ರಯಾಣಿಕರನ್ನು ತಕ್ಷಣವೇ ಸ್ಥಳಾಂತರಿಸಿರಲಿಲ್ಲ. ರಾತ್ರಿ 11 ಗಂಟೆಯ ನಂತರ ಪ್ರಯಾಣಿಕರು ವಿಮಾನದಿಂದ ಇಳಿದು ಮಧ್ಯರಾತ್ರಿಯ ಸುಮಾರಿಗೆ ಮತ್ತೊಂದು ವಿಮಾನದಲ್ಲಿ ಉಳಿದುಕೊಂಡರು.

ಪ್ರಯಾಣಿಕರಲ್ಲಿ ಒಬ್ಬರಾದ ಪ್ರಿಯಾಂಕಾ ಕುಮಾರ್ ಅವರು ಘಟನೆಯ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಂಜಿನ್‌ ಬೆಂಕಿಯಾಡುವ ದೃಶ್ಯ ಸೆರೆಯಾಗಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಆರಿದೆ ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next