Advertisement
ಏನು ನಡೆಯಿತು?ಸೆ.16ರಂದು ದಿಲ್ಲಿ-ಇಸ್ತಾನ್ ಬುಲ್ ನಡುವೆ ಪ್ರಯಾಣಿಸುವ ಇಂಡಿಗೋ ವಿಮಾನ ಅತೀಯಾದ ಗಾಳಿ ಇರುವ ಕಾರಣ ತನ್ನ ಪ್ರಯಾಣಿಕರನ್ನು ಅವರ ಲಗೇಜ್ ಜತೆಗೆ ಕರೆದೊಯ್ದಿಲ್ಲ. ಈ ಕಾರಣದಿಂದ ಬರೀ ಗೈಯಲ್ಲಿ ಪ್ರಯಾಣಿಕರು ವಿಮಾನದಿಂದ ಇಳಿದಿದ್ದಾರೆ.
ಏನಿದಕ್ಕೆ ಕಾರಣ ಗೊತ್ತಾ?
ಇಂಡಿಗೋದಲ್ಲಿದ್ದ ಯಾವುದೇ ಪ್ರಯಾಣಿಕರು ಈ ತನಕ ತಮ್ಮ ಲಗೇಜ್ ಗಳನ್ನು ಪಡೆದುಕೊಂಡ್ಲಿಲ. ಸಂಸ್ಥೆ ಈ ನಡೆಗೆ ಭಾರೀ ಗಾಳಿ (heavy headwind) ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪ್ರಯಾಣಿಕರು ಹೇಳಿದ್ದಾರೆ.
ವಿಮಾನ ಹಾರಾಟ ನಡೆಸುವ ಸಾವಿರಾರು ಅಡಿ ಎತ್ತರದಲ್ಲಿ ಬಲವಾದ ಗಾಳಿಗಳು ಕಂಡು ಬಂದ ಕಾರಣ ಇಂಡಿಗೋ ಈ ಕ್ರಮ ಕೈಗೊಂಡಿದೆ. ಹೆಡ್ವಿಂಡ್ ಎಂದರೆ ವಿಮಾನ ಚಲಿಸುವ ವಿರುದ್ಧ ದಿಕ್ಕಿ (ಎದುರಿ)ನಿಂದ ಬೀಸುವ ಗಾಳಿಯಾಗಿದೆ. ಇಂತಹ ಗಾಳಿಗಳು ವಿಮಾನಕ್ಕೆ ಅಪಾಯವನ್ನುಂಟುಮಾಡುವ ಸಾಧ್ಯತೆ ಹೆಚ್ಚು. ಇಂತಹ ಗಾಳಿಗಳಿರುವ ಸಂದರ್ಭ ವಿಮಾನ ತನ್ನ ವಾಡಿಕೆಗಿಂತ ಹೆಚ್ಚು ಇಂಧನವನ್ನು ದಹಿಸಬೇಕಾಗುತ್ತದೆ. ಇನ್ನು ಲಗೇಜ್ ಗಳೂ ಇದ್ದರೆ ವಿಮಾನ ಮತ್ತಷ್ಟು ಕ್ಷಮತೆ ಹೊಂದಲು ಇಂಧನವನ್ನು ಹೆಚ್ಚು ಉರಿಸಬೇಕಾಗುತ್ತದೆ. ವಿಮಾನದಲ್ಲಿ ಇಂಧನ ಕಡಿಮೆಯಾದರೆ ಎಂಬ ಸಂಭಾವ್ಯ ಕಾರಣಕ್ಕೆ ಸಂಸ್ಥೆ ಈ ಕ್ರಮಕೈಗೊಂಡಿದೆ.
ಟೈಲ್ವಿಂಡ್ ಇದ್ದರೆ ಓಕೆ?
ಹೆಡ್ವಿಂಡ್ ಮತ್ತು ಟೈಲ್ ವಿಂಡ್ ವಿಮಾನ ಸಂಚಾರಗಲ್ಲಿ ಹೆಚ್ಚು ಬಳಸಲ್ಪಡುವ ತಾಂತ್ರಿಕ ಭಾಷೆಯಾಗಿದೆ. ಹೆಡ್ವಿಂಡ್ ವಿಮಾನದ ವಿರುದ್ಧ ದಿಕ್ಕಿನಿಂದ ಬೀಸಿದರೆ ಅದು ವಿಮಾನಕ್ಕೆ ಹೆಚ್ಚು ಅಪಾಯಕಾರಿಯಾಗುತ್ತದೆ. ಆದರೆ ಟೇಲ್ವಿಂಡ್ ಗಳು ವಿಮಾನ ಚಲಿಸುವ ಪಥದಲ್ಲಿ ಬೀಸುತ್ತದೆ. (ಉದಾ: ವಿಮಾನದ ಹಿಂದಿನಿಂದ ಅಥವ ವಿಮಾನ ಚಲಿಸತ್ತಿರುವ ಪಥದಲ್ಲಿ ಬೀಸಿದರೆ ಅದು ಟೇಲ್ವಿಂಡ್) ಈ ಟೇಲ್ವಿಂಡ್ ಗಳು ವಿಮಾನಕ್ಕೆ ಬೆಂಬಲವಾಗಿರುತ್ತದೆ. ಈ ಗಾಳಿಗಳು ಬೀಸಿದರೆ ವಿಮಾನ ಹೆಚ್ಚು ಇಂಧನ ಧಹಿಸಬೇಕಾಗಿಬರುವುದಿಲ್ಲ. ಗಾಳಿ ವಿಮಾನವನ್ನು ಬೆಂಬಲಿಸುತ್ತದೆ. ಈ ಅವಧಿಯಲ್ಲಿ ಹೆಚ್ಚು
ಸಾಮಾನ್ಯವಾಗಿ ಈ ಅವಧಿಯಲ್ಲಿ ಇಂತಹ ಹೆಡ್ವಿಂಡ್ ಗಳು ಹೆಚ್ಚು ಕಂಡುಬರುತ್ತದೆ. ಈ ಸಮಯದಲ್ಲಿ ವಿಮಾನದ ಪ್ರಯಾಣ ಅವಧಿ ಹೆಚ್ಚಾದಂತೆ ಕಂಡುಬರುತ್ತದೆ. ವಿಮಾನದ ವೇಗ ಕಡಿಮೆಯಾಗುವುತ್ತದೆ.
Related Articles
ಸಾಮಾನ್ಯವಾಗಿ ಇಸ್ತಾನ್ಬುಲ್ ಮತ್ತು ದಿಲ್ಲಿ ಪ್ರಯಾಣ 5.20 ನಿಮಿಷ ತೆಗದುಕೊಳ್ಳುತ್ತದೆ. ಆದರೆ ದಿಲ್ಲಿ-ಇಸ್ತಾನ್ ಬುಲ್ ಪ್ರಯಾಣ 6.40 ನಿಮಿಷ ತೆಗೆದುಕೊಂಡಿದೆ. ಅಂದರೆ 1.10 ನಿಮಿಷ ವಿಮಾನ ಗಾಳಿಯಲ್ಲಿ ಹೆಚ್ಚಾಗಿ ಕಳೆದಿದೆ ಎಂದರ್ಥ.
Advertisement
ಪ್ರಯಾಣಿಕರು ಓಕೆ ಆದರೆ ಲಗೇಜ್ ಯಾಕಿಲ್ಲ?ಒಂದು ವಿಮಾನ ಕಡಿಮೆ ಇಂಧನದಲ್ಲಿ ಅತೀ ಹೆಚ್ಚು ದೂರ ಕ್ರಮಿಸಬೇಕಾದರೆ ವಿಮಾನದ ಪೆಲೋಡ್ ಅಥವಾ ಭಾರ ಕಡಿಮೆ ಇರಬೇಕು. ಹೀಗಿದ್ದಲ್ಲಿ ಮಾತ್ರ ವಿಮಾನ ಸುದೀರ್ಘವಾಧಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಪ್ರಯಾಣಿಕರನ್ನು ಮಾತ್ರ ಈ ಮಾರ್ಗದಲ್ಲಿ ಕರೆದೊಯ್ದು ಅವರ ಲಗೇಜ್ ಗಳನ್ನು ಬಿಟ್ಟು ಬರಲಾಗಿದೆ. ಒಂದು ವೇಳೆ ಪ್ರಯಾಣಿಕರು ಮತ್ತು ಅವರ ಕಾರ್ಗೋ ಲಗೇಜ್ ಗಳು ಇದ್ದಿದ್ದರೆ ಅದು ಮತ್ತೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು ಅಥವಾ ಇಂಧನದ ಕೊರತೆಯಾಗುತ್ತಿತ್ತು.