Advertisement

ಕಾಮನ್‌ವೆಲ್ತ್ ಗೇಮ್ಸ್‌: 14 ವರ್ಷದ ಅನಾಹತ್‌ ಸಿಂಗ್‌ ಸ್ಕ್ವಾಷ್‌ನಲ್ಲಿ ಗೆಲುವಿನ ಆರಂಭ

11:58 PM Jul 30, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅತೀ ಕಿರಿಯ ಕ್ರೀಡಾಪಟು, 14 ವರ್ಷದ ಅನಾಹತ್‌ ಸಿಂಗ್‌ ಸ್ಕ್ವಾಷ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

Advertisement

ತಡರಾತ್ರಿ ಆಡಲಾದ ವನಿತಾ ಸಿಂಗಲ್ಸ್‌ “ಎ’ ವಿಭಾಗದ 64ರ ಸುತ್ತಿನ ಪಂದ್ಯದಲ್ಲಿ ಅವರು ಸೇಂಟ್‌ ವಿನ್ಸೆಂಟ್‌ ಆ್ಯಂಡ್‌ ಗ್ರೆನಡಾದ ಜಡಾ ರೋಸ್‌ ವಿರುದ್ಧ 11-5, 11-2, 11-0 ಅಂತರದ ಅಮೋಘ ಗೆಲುವು ಸಾಧಿಸಿದರು.

“ಇದು ಸೀನಿಯರ್‌ ವಿಭಾಗದ ನನ್ನ ಮೊದಲ ಸ್ಪರ್ಧೆ. ಹೀಗಾಗಿ ಏನನ್ನು ನಿರೀಕ್ಷಿಸಬೇಕೆಂಬುದೇ ತಿಳಿಯಲಿಲ್ಲ. ಆದರೆ ಪಂದ್ಯ ಮುಂದುವರಿದಂತೆ ಆತ್ಮವಿಶ್ವಾಸವೂ ಹೆಚ್ಚುತ್ತ ಹೋಯಿತು. ಇಲ್ಲಿ ನನ್ನ ಕುಟುಂಬದ ಬಹಳಷ್ಟು ಸದಸ್ಯರಿದ್ದಾರೆ.

ಎಲ್ಲರೂ ನನಗೆ ಭಾರೀ ಬೆಂಬಲ ನೀಡಿದರು’ ಎಂಬುದಾಗಿ ಅನಾಹತ್‌ ಪ್ರತಿಕ್ರಿಯಿಸಿದರು.ಅಂಡರ್‌-15 ವಿಭಾಗದಲ್ಲಿ ನೀಡಿದ ಅಮೋಘ ಪ್ರದರ್ಶನ ಅನಾಹತ್‌ ಆಯ್ಕೆಗೆ ಕಾರಣ. ಅವರು ಈ ವರ್ಷದ ಏಷ್ಯನ್‌ ಜೂನಿಯರ್‌ ಸ್ಕ್ವಾಷ್‌ ಮತ್ತು ಜರ್ಮನ್‌ ಓಪನ್‌ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next