ನವ ದೆಹಲಿ : ತನ್ನ ನೆರೆಯ ರಾಷ್ಟ್ರಗಳಿಗೆ ಕೋವಿಡ್ ಲಸಿಕೆಗಳನ್ನು ಉಡುಗೊರೆಯಾಗಿ ನೀಡುವುದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಮುಂದುವರಿಸಿದೆ.
ಪ್ರಸ್ತುತ ಭಾರತವು 50, 400 ಕೋವಿಶೀಲ್ಡ್ ಡೋಸ್ ಗಳನ್ನು ಶ್ರೀಲಂಕಾಕ್ಕೆ ಮತ್ತು 10, 800 ಡೋಸ್ ಗಳನ್ನು ಬಹ್ರೇನ್ ದೇಶಗಳಿಗೆ ರವಾನಿಸಿದೆ.
ಓದಿ : ಬರಲಿದೆ “ಟೆಸ್ಲಾ ಮಾಡೆಲ್ 3” ಕಾರು : ವಿಶೇಷತೆಗಳೇನು..?
ಕೋವಿಡ್ 19 ಸಮಸ್ಯೆಯನ್ನು ನಿವಾರಿಸಲು ಕೋವಿಶೀಲ್ಡ್ ಲಸಿಕೆಯನ್ನು ಭಾರತ ಸರ್ಕಾರಕ್ಕೆ ಕೇಳಿತ್ತು. ಆ ಹಿನ್ನೆಲೆಯಲ್ಲಿ, ಮುಂಬೈ ವಿಮಾನ ನಿಲ್ದಾಣದಿಂದ ಇಂದು (ಜ. 28) ಬೆಳಗ್ಗೆ ಮನಮಾಗೆ 7:55 ಕ್ಕೆ ಹಾಗೂ ಕೊಲೊಂಬೊಗೆ 9:00 ಗಂಟೆಗೆ ರವಾನಿಸಲಾಯಿತು.
ಸರ್ಕಾರದ ಔಷಧ ನಿಯಂತ್ರಣ ಮಂಡಳಿಯು ಇತ್ತೀಚೆಗೆ ಅನುಮೋದಿಸಿದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ತಯಾರಿಸಿದ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಶೀಲ್ಡ್ ಲಸಿಕೆಯನ್ನು ಈ ಹಿಂದೆ ಭಾರತ ತನ್ನ ನೆರೆಯ ರಾಷ್ಟ್ರಗಳಾದ ಭಾಂಗ್ಲಾದೇಶ, ನೇಪಾಳ, ಭೂತಾನ್, ಮಾಲ್ಡೀವ್ಸ್ ಗಳಿಗೆ ಕೋವಿಡ್ ಲಸಿಕೆಗಳನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದೆ.
ಓದಿ : ಕಾಶ್ಮೀರದಲ್ಲಿ ಶೂಟಿಂಗ್ ಮುಗಿಸಿದ ‘777 ಚಾರ್ಲಿ’