Advertisement
ಟೆಸ್ಟ್ ತಂಡವನ್ನು ಪ್ರವೇಶಿಸಿದ ಹೊಸಬರೆಂದರೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ವಿಲ್ ಪುಕೋವ್‌ಸ್ಕಿ,ಆಲ್ ರೌಂಡರ್ ಕ್ಯಾಮರೂನ್ ಗ್ರೀನ್, ಲೆಗ್‌ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್, ಪೇಸ್ ಬೌಲಿಂಗ್ ಆಲ್‌ರೌಂಡರ್‌ಗಳಾದ ಮೈಕಲ್ ನೆಸರ್ ಮತ್ತು ಸೀನ್ ಅಬೋಟ್. ದೇಶಿ ಕ್ರಿಕೆಟ್ ಪಂದ್ಯಾ ವಳಿ ಯಾದ “ಶೆಫೀಲ್ಡ್ ಶೀಲ್ಡ್’ನಲ್ಲಿ ಅಮೋಘ ಸಾಧನೆಗೈದ ಹಿನ್ನೆಲೆಯಲ್ಲಿ ಇವರು ರಾಷ್ಟ್ರೀಯ ತಂಡಕ್ಕೆ ಕರೆ ಪಡೆದರು.
ಅಸಾಮಾನ್ಯ ಪ್ರತಿಭಾವಂತರು ಎಂಬು ದಾಗಿ ಆಸೀಸ್ ಆಯ್ಕೆ ಸಮಿತಿ ಅಧ್ಯಕ್ಷ ಟ್ರೆವರ್ ಹಾನ್ಸ್ ಹೇಳಿದರು. 22 ವರ್ಷದ ಪುಕೋವ್‌ಸ್ಕಿ ಆಡಿದ ಎರಡೂ ಶೆಫೀಲ್ಡ್ ಶೀಲ್ಡ್ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿ ಮೆರೆದಿದ್ದಾರೆ (247.50 ಸರಾಸರಿಯಲ್ಲಿ 495 ರನ್). ಅಷ್ಟೇನೂ ಫಾರ್ಮ್ನಲ್ಲಿಲ್ಲದ ಜೋ ಬರ್ನ್ಸ್ ಬದಲು ಪುಕೋವ್‌ಸ್ಕಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ. ಕ್ಯಾಮರೂನ್ ಗ್ರೀನ್ ಈಗಾಗಲೇ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸ್ವೆಪ್ಸನ್ 2018ರಲ್ಲಿ ಏಕೈಕ ಟಿ20 ಪಂದ್ಯ ದಲ್ಲಿ ಆಸ್ಟ್ರೇಲಿಯವನ್ನು ಪ್ರತಿನಿಧಿಸಿದ್ದಾರೆ. ಮೈಕಲ್ ನೆಸೆರ್ 2 ಏಕದಿನ ಪಂದ್ಯ ಗಳನ್ನಾಡಿದ್ದಾರೆ. ಅಬೋಟ್ ಒಂದು ಏಕದಿನ, 4 ಟಿ20 ಪಂದ್ಯಗಳಲ್ಲಿ ಕಾಂಗರೂ ಪರ ಆಡಿದ್ದಾರೆ. ಆಸ್ಟ್ರೇಲಿಯ ಟೆಸ್ಟ್ ತಂಡ
ಟಿಮ್ ಪೇನ್ (ನಾಯಕ), ಡೇವಿಡ್ ವಾರ್ನರ್, ಜೋ ಬರ್ನ್ಸ್, ಕ್ಯಾಮರೂನ್ ಗ್ರೀನ್, ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್, ಸೀನ್ ಅಬೋಟ್, ಟ್ರ್ಯಾವಿಸ್ ಹೆಡ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಝಲ್‌ವುಡ್, ಜೇಮ್ಸ್ ಪ್ಯಾಟಿನ್ಸನ್, ಮೈಕಲ್ ನೆಸರ್, ನಥನ್ ಲಿಯಾನ್, ವಿಲ್ ಪೊಕೋವ್‌ಸ್ಕಿ, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್.
Related Articles
ಜೋ ಬರ್ನ್ಸ್, ಟ್ರ್ಯಾವಿಸ್ ಹೆಡ್, ಅಲೆಕ್ಸ್ ಕ್ಯಾರಿ, ಮೊಸಸ್ ಹೆನ್ರಿಕ್ಸ್, ಸೀನ್ ಅಬೋಟ್, ಆ್ಯಶrನ್ ಅಗರ್, ಟಿಮ್ ಪೇನ್, ಜೇಮ್ಸ್ ಪ್ಯಾಟಿನ್ಸನ್, ವಿಲ್ ಪುಕೋವ್‌ಸ್ಕಿ, ಮಾರ್ಕ್ ಸ್ಟೆಕೆಟಿ, ವಿಲ್ ಸದರ್‌ಲ್ಯಾಂಡ್, ಮಿಚೆಲ್ ಸ್ವೆಪ್ಸನ್, ಜಾಕ್ಸನ್ ಬರ್ಡ್, ಹ್ಯಾರಿ ಕಾನ್ವೇ, ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ನಿಕ್ ಮ್ಯಾಡಿನ್ಸನ್, ಮಿಚೆಲ್ ಮಾರ್ಷ್, ಮೈಕಲ್ ನೆಸೆರ್.
Advertisement