Advertisement
ಇದರ ಬಗ್ಗೆ ಪಾಕಿಸ್ಥಾನದ ಟಿವಿ ಚಾನೆಲ್ಗಳಲ್ಲಿ ಭಾರಿ ಚರ್ಚೆಯೂ ನಡೆದಿದೆ. ಅಷ್ಟೇ ಅಲ್ಲ, ಕೆಲವು ತಜ್ಞರು ಟೊಮೇಟೊ ಸ್ವಾವಲಂಬನೆಗೆ ಕಾನೂನು ತರಬೇಕು ಎಂದಿದ್ದಾರೆ! ಪುಲ್ವಾಮಾ ದಾಳಿ ಅನಂತರ, ಮಧ್ಯಪ್ರದೇಶದ ಝಬುವಾದಲ್ಲಿ ಭಾರಿ ಪ್ರಮಾಣದಲ್ಲಿ ಟೊಮೇಟೊ ಬೆಳೆಯುತ್ತಿದ್ದು,
ಇಲ್ಲಿನ ರೈತರು ಪಾಕಿಸ್ಥಾನಕ್ಕೆ ರಫ್ತು ಮಾಡಲು ನಿರಾಕರಿಸಿದ್ದಾರೆ. ಆದರೆ ಈಗಲೂ ಅಲ್ಪ ಪ್ರಮಾಣದಲ್ಲಿ ಟೊಮೇಟೊ ರಫ್ತಾಗು ತ್ತಿದ್ದರೂ ಊಹಾಪೋಹದಿಂದಾಗಿಯೇ ಪಾಕ್ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ.