Advertisement

ಭಾರತಕ್ಕೆ ಇಂದಿನಿಂದ ತ್ರಿದಿನ ಅಭ್ಯಾಸ ಪಂದ್ಯ

01:02 AM Aug 17, 2019 | Team Udayavani |

ಕೂಲಿಜ್‌ (ಆ್ಯಂಟಿಗುವಾ): ವೆಸ್ಟ್‌ ಇಂಡೀಸ್‌ ವಿರುದ್ಧ ಈಗಾಗಲೇ ಟಿ20 ಮತ್ತು ಏಕದಿನ ಸರಣಿಗಳನ್ನು ಗೆದ್ದ ಭಾರತದ ಮುಂದಿನ ಗುರಿ ಟೆಸ್ಟ್‌ ಸರಣಿ. ಇದನ್ನೂ ವಶಪಡಿಸಿಕೊಂಡರೆ ವಿಂಡೀಸ್‌ ನೆಲದಲ್ಲಿ ಮೂರೂ ಪ್ರಕಾರಗಳ ಕ್ರಿಕೆಟ್‌ನಲ್ಲಿ ಮೊದಲ ಸಲ ಸರಣಿ ಗೆದ್ದ ಅಪರೂಪದ ದಾಖಲೆ ಭಾರತದ್ದಾಗಲಿದೆ.

Advertisement

ಹೀಗಾಗಿ ಶನಿವಾರದಿಂದ ಆರಂಭವಾಗಲಿರುವ ತ್ರಿದಿನ ಅಭ್ಯಾಸ ಪಂದ್ಯವನ್ನು ಕೊಹ್ಲಿ ಪಡೆ ಗಂಭೀರವಾಗಿಯೇ ತೆಗೆದುಕೊಳ್ಳಲಿದೆ. ಇದರಲ್ಲಿ ಭಾರತದ ಎದುರಾಳಿ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಇಲೆವೆನ್‌.

ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿರುವ ಅಜಿಂಕ್ಯ ರಹಾನೆ, ಚೇತೇಶ್ವರ್‌ ಪೂಜಾರ, ಜಸ್‌ಪ್ರೀತ್‌ ಬುಮ್ರಾ ಅವರೆಲ್ಲ ಸಕಾಲದಲ್ಲಿ ತಂಡವನ್ನು ಸೇರಿಕೊಳ್ಳುವ ಕಾರಣ, ಭಾರತವಿಲ್ಲಿ ಬಲಿಷ್ಠ ಪಡೆಯನ್ನು ಕಣಕ್ಕಿಳಿಸುವುದು ಖಚಿತ.

ಟೆಸ್ಟ್‌ ತಂಡದ ಉಪನಾಯಕನಾ ಗಿರುವ ಅಜಿಂಕ್ಯ ರಹಾನೆ ವಿಶ್ವಕಪ್‌ಗೆ ಆಯ್ಕೆಯಾಗದ ಬೇಸರವನ್ನು ಹೊರಗೆಡಹಿದ್ದರು. ಆದರೆ ಇತ್ತೀಚೆಗೆ ಇಂಗ್ಲಿಷ್‌ ಕೌಂಟಿಯಲ್ಲಿ ಭರ್ಜರಿ ಪ್ರದ ರ್ಶನ ನೀಡಿದ್ದು, 7 ಇನ್ನಿಂಗ್ಸ್‌ಗಳಿಂದ 307 ರನ್‌ ಬಾರಿಸಿ ಗಮನ ಸೆಳೆದಿದ್ದಾರೆ.

ಕರ್ನಾಟಕದ ಆರಂಭಿಕರು
ಆರಂಭಿಕರಾಗಿ ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌-ಕೆ.ಎಲ್‌. ರಾಹುಲ್‌ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು, ಮೂಲತಃ ಮಧ್ಯಮ ಸರದಿಯ ಆಟಗಾರನಾಗಿರುವ ಹನುಮ ವಿಹಾರಿ ಅವರನ್ನೂ ಓಪನರ್‌ ಆಗಿ ಇಳಿಸಬಹುದು. ಹಾಗೆಯೇ ಇಬ್ಬರು ಕೀಪರ್‌ಗಳಲ್ಲಿ ಸಾಹಾ ಮೊದಲ ಆಯ್ಕೆಯಾಗುವ ಸಾಧ್ಯತೆ ಹೆಚ್ಚು.

Advertisement

ವೇಗದ ಬೌಲಿಂಗ್‌ ವಿಭಾಗದಲ್ಲಿ ಅನುಭವಿಗಳಾದ ಉಮೇಶ್‌ ಯಾದವ್‌, ಇಶಾಂತ್‌ ಶರ್ಮ, ಮೊಹಮ್ಮದ್‌ ಶಮಿ ಅವಕಾಶ ಪಡೆದಿದ್ದಾರೆ. ರವೀಂದ್ರ ಜಡೇಜ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಆಗಿದ್ದು, ಆರ್‌. ಅಶ್ವಿ‌ನ್‌ ಮತ್ತು ಕುಲದೀಪ್‌ ಪ್ರಧಾನ ಸ್ಪಿನ್ನರ್‌ಗಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next