Advertisement

ಭಾರತದ ಅತಿ ಎತ್ತರದ ವ್ಯಕ್ತಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

11:19 AM Jan 23, 2022 | Team Udayavani |

ಲಕ್ನೋ : ಉತ್ತರ ಪ್ರದೇಶದಲ್ಲಿ ಬಿಜೆಪಿಯ ಪ್ರಮುಖ ನಾಯಕರಾದ ಸ್ವಾಮಿ ಪ್ರಸಾದ್ ಮೌರ್ಯ, ದಾರಾ ಸಿಂಗ್ ಚೌಹಾಣ್, ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಭಾರತದ ಅತಿ ಎತ್ತರದ ವ್ಯಕ್ತಿ ಪ್ರತಾಪ್ ಸಿಂಗ್ ಅವರು ಅಖಿಲೇಶ್ ಯಾದವ್ ಅವರ ಪಕ್ಷಕ್ಕೆ ಸೇರಿದ್ದಾರೆ.

Advertisement

8 ಅಡಿ 1 ಇಂಚು ಎತ್ತರವಿರುವ ದೇಶದ ಅತಿ ಎತ್ತರದ ವ್ಯಕ್ತಿ ಎಂದು ಸಿಂಗ್ ಅಖಿಲೇಶ್ ಯಾದವ್ ಸೇರಿದಂತೆ ಸಮಾಜವಾದಿ ಪಕ್ಷದ ನಾಯಕರೊಂದಿಗೆ ಪೋಸ್ ನೀಡಿರುವ ಫೋಟೋವನ್ನು ಪಕ್ಷವು ಟ್ವೀಟ್ ಮಾಡಿದೆ.

ಅತಿ ಎತ್ತರದ ಮನುಷ್ಯ ಎಂಬ ವಿಶ್ವ ದಾಖಲೆಗೆ ಪಾತ್ರರಾಗಿರುವ ವ್ಯಕ್ತಿಯ ಎತ್ತರ ಧರ್ಮೇಂದ್ರ ಅವರಿಗಿಂತ 11 ಇಂಚು ಹೆಚ್ಚು.

ಪ್ರತಾಪಗಢ ಜಿಲ್ಲೆಯ ನರಹರ್ಪುರ್ ಕಾಸಿಯಾಹಿ ಗ್ರಾಮದ ನಿವಾಸಿಯಾಗಿರುವ ಧರ್ಮೇಂದ್ರ ಉತ್ತರಪ್ರದೇಶದಲ್ಲಿ ಎತ್ತರಕ್ಕೆ ಬಹಳ ಪ್ರಸಿದ್ಧರಾಗಿದ್ದು, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next