Advertisement

ಸುರಿನಾಮ್‌ ಅಭಿವೃದ್ಧಿಗೆ ಭಾರತದ ಬೆಂಬಲ: ದ್ರೌಪದಿ ಮುರ್ಮು

09:47 PM Jun 07, 2023 | Team Udayavani |

ಪರಮಾರಿಬೊ: ದಕ್ಷಿಣ ಆಫ್ರಿಕಾದ ರಾಷ್ಟ್ರ ಸುರಿನಾಮ್‌ನ ಅಭಿವೃದ್ಧಿಗೆ ಸಹಾಯಹಸ್ತ ಚಾಚಲು, ಬೆಂಬಲಿಸಲು ಭಾರತ ಸದಾ ಬದ್ಧವಾಗಿದೆ. ಭಾರತದ ಜತೆಗೆ ಸುರಿನಾಮ್‌ಗೆ ಭೌಗೋಳಿಕ ನಂಟಿಲ್ಲದಿದ್ದರೂ ಇತಿಹಾಸ, ಸಂಸ್ಕೃತಿಯ ಬೆಸುಗೆ ಇದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

Advertisement

ಮೂರು ದಿನಗಳ ಪ್ರವಾಸ ನಿಮಿತ್ತ ಸುರಿನಾಮ್‌ನಲ್ಲಿರುವ ಮುರ್ಮು, ಸುರಿನಾಮ್‌ ಅಧ್ಯಕ್ಷ ಚಂದ್ರಿಕಾಪ್ರಸಾದ್‌ ಸಂತೋಖೀ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ, ದೇಶದಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಮೂಲಸೌಕರ್ಯ, ಹೊಸ ತಂತ್ರಜ್ಞಾನ, ಡಿಜಿಟಲ್‌ ಸೇವೆ, ಫಿನ್‌ಟೆಕ್‌ ಸೇರಿದಂತ ಹಲವು ಕ್ಷೇತ್ರಗಳ ಬಗ್ಗೆಗಿನ ಅನುಭವವನ್ನು ಭಾರತ ಸುರಿನಾಮ್‌ ಜತೆಗೆ ಹಂಚಿಕೊಳ್ಳುವ ಆ ಮೂಲಕ ದೇಶದ ಪ್ರಗತಿಗೆ ನೆರವಾಗಲು ಸಿದ್ಧವಿದೆ. ಸುರಿನಾಮ್‌ನ ಜನತೆಗೆ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಈ ದೇಶದಲ್ಲಿರುವ ಭಾರತೀಯ ಮೂಲದ ನಿವಾಸಿಗಳು ಉಭಯ ದೇಶದ ನಡುವಿನ ಸಂಬಂಧ ಸೇತುವೆ ಎಂದೂ ಮುರ್ಮು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next