Advertisement
ಏಕೆ ಈ ರಫ್ತು? ಕಳೆದ ವರ್ಷ ಉತ್ತಮ ಮಳೆಯಾಗಿದ್ದರ ಪರಿಣಾಮ, ದೇಶಾದ್ಯಂತ ಹೆಚ್ಚು ಸಕ್ಕರೆ ಉತ್ಪಾದನೆ ಆಗಿದೆ. ಸದ್ಯಕ್ಕೆ ದೇಶದ ಗೋದಾಮುಗಳಲ್ಲಿ ಅಗತ್ಯಕ್ಕಿಂತ 70 ಲಕ್ಷ ಟನ್‌ನಷ್ಟು ಸಕ್ಕರೆ ದಾಸ್ತಾನಾಗಿದೆ. ಹಾಗಾಗಿ, ದೈತ್ಯ ಸಕ್ಕರೆ ರಾಶಿಯನ್ನು ವಿಲೇವಾರಿ ಮಾಡಲೇಬೇಕಾದ ಅನಿವಾರ್ಯತೆಗೆ ಸರಕಾರ ಸಿಲುಕಿದೆ.
ಚೀನ ದೇಶ ಅತಿ ಹೆಚ್ಚು ಸಕ್ಕರೆ ಆಮದು ಮಾಡಿಕೊಳ್ಳುವ ದೇಶವಾಗಿದ್ದು, ವರ್ಷಕ್ಕೆ ಏನಿಲ್ಲವೆಂದರೂ 45 ಲಕ್ಷ ಟನ್ ಸಕ್ಕರೆಯನ್ನು ಅದು ಬ್ರೆಜಿಲ್, ಥಾಯ್ಲೆಂಡ್, ಕ್ಯೂಬಾದಿಂದ ಆಮದು ಮಾಡಿಕೊಳ್ಳುತ್ತದೆ. ಸಕ್ಕರೆ ವಿಚಾರದಲ್ಲಿ ದೊಡ್ಡ ಗ್ರಾಹಕ ರಾಷ್ಟ್ರವಾಗಿರುವುದರಿಂದ ಚೀನದೊಂದಿಗೆ ಭಾರತ ವ್ಯವಹಾರದ ಒಪ್ಪಂದ ಮಾಡಿ ಕೊಂಡಿದೆ. ದೊಡ್ಡ ವ್ಯವಹಾರ
2007ರಲ್ಲಿ 2 ಲಕ್ಷ ಟನ್‌ನಷ್ಟು ಸಕ್ಕರೆಯನ್ನು ಭಾರತ, ಚೀನಕ್ಕೆ ರಫ್ತು ಮಾಡಿತ್ತು. ಅದು ಬಿಟ್ಟರೆ, ಅಷ್ಟು ದೊಡ್ಡ ಪ್ರಮಾಣದ ರಫ್ತು ಆಗುತ್ತಿರುವುದು ಇದೇ ಮೊದಲು.