Advertisement

ಸಹಜ ಮುಂಗಾರು: ಐಎಂಡಿ ವಿಶ್ವಾಸ

02:13 AM Apr 15, 2022 | Team Udayavani |

ಹೊಸದಿಲ್ಲಿ: ಈ ವರ್ಷ ಮುಂಗಾರು ಮಳೆ ಸಹಜ ಪ್ರಮಾಣದಲ್ಲಿ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ವಿಶ್ವಾಸ ವ್ಯಕ್ತಪಡಿಸಿದೆ.

Advertisement

ಮಂಗಳವಾರವಷ್ಟೇ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್‌ ಇದೇ ವಿಧವಾದ ನಿರೀಕ್ಷೆ ವ್ಯಕ್ತಪಡಿಸಿತ್ತು. ದೀರ್ಘ‌ಕಾಲಿಕ ಸರಾಸರಿ (ಎಲ್‌ಪಿಎ)ಯ ಶೇ. 99ರಷ್ಟು ಸಹಜ ಮುಂಗಾರು ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

ಜೂನ್‌-ಸೆಪ್ಟಂಬರ್‌ ಅವಧಿಯಲ್ಲಿ 87 ಸೆಂ.ಮೀ. ದೀರ್ಘ‌ಕಾಲಿಕ ಸರಾಸರಿ ಮಳೆಯಾಗಲಿದೆ ಎಂದು ಐಎಂಡಿ ಹೇಳಿದ್ದು, ಈಶಾನ್ಯ ಭಾರತ, ಜಮ್ಮು- ಕಾಶ್ಮೀರ, ರಾಜಸ್ಥಾನ, ಹರಿಯಾಣ, ಪಂಜಾಬ್‌, ತ. ನಾಡು, ಕೇರಳ ಮತ್ತು ಲಡಾಖ್‌ನ ಕೆಲವು ಭಾಗಗಳು ಬಿಟ್ಟರೆ ದೇಶದೆಲ್ಲೆಡೆ ಉತ್ತಮ ಮಳೆಯಾಗುವ ನಿರೀಕ್ಷೆ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next