Advertisement

ಭಾರತದ ಆರ್ಥಿಕ ಪ್ಯಾಕೇಜ್: ಪಾಕ್ ಸೇರಿದಂತೆ ಜಗತ್ತಿನ 148 ದೇಶಗಳ ವಾರ್ಷಿಕ ಜಿಡಿಪಿಗೆ ಸಮ!

08:57 AM May 14, 2020 | Nagendra Trasi |

ನವದೆಹಲಿ: ಕೋವಿಡ್ ಸಂಕಷ್ಟದಿಂದ ಕುಸಿದಿರುವ ದೇಶದ ಆರ್ಥಿಕತೆ ಮೇಲೆತ್ತಲು ಪ್ರಧಾನಿ ನರೇಂದ್ರ ಮೋದಿ ಅವರು “ಆತ್ಮನಿರ್ಭರ್ ಭಾರತ್ ಅಭಿಯಾನ(ಸ್ವಾವಲಂಬಿ ಭಾರತ)ದಡಿ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ನೆರವಿನ ಪ್ಯಾಕೇಜ್ ಶೇ.83ರಷ್ಟು ಪಾಕಿಸ್ತಾನದ ವಾರ್ಷಿಕ ಜಿಡಿಪಿಯಷ್ಟಾಗಲಿದೆ ಎಂದು ವರದಿ ತಿಳಿಸಿದೆ.

Advertisement

ಅಷ್ಟೇ ಅಲ್ಲ ವಿಶ್ವಬ್ಯಾಂಕ್ ನ ಜಿಡಿಪಿ ಅಂಕಿಅಂಶದ ಪ್ರಕಾರ, ಭಾರತ ಘೋಷಿಸಿರುವ ಆರ್ಥಿಕ ನೆರವಿನ ಪ್ಯಾಕೇಜ್ ಜಗತ್ತಿನ 149 ದೇಶಗಳ ವಾರ್ಷಿಕ ಜಿಡಿಪಿಕ್ಕಿಂತ ಹೆಚ್ಚು ಎಂದು ವಿವರಿಸಿದೆ.

ಮಂಗಳವಾರ ಘೋಷಿಸಿದ್ದ ಆರ್ಥಿಕ ನೆರವಿನ ಪ್ಯಾಕೇಜ್ ಭಾರತದ ಜಿಡಿಪಿಯ ಶೇ.10ರಷ್ಟು ಎಂದು ತಿಳಿಸಿತ್ತು. ಆತ್ಮನಿರ್ಭರ್ ಭಾರತ್ ಅಭಿಯಾನದಡಿ ಘೋಷಿಸಿದ ಈ ಪ್ಯಾಕೇಜ್ ಡಾಲರ್ ಗೆ ಪರಿವರ್ತಿಸಿದಲ್ಲಿ ಇದು ಪಾಕಿಸ್ತಾನದ ವಾರ್ಷಿಕ ಜಿಡಿಪಿಯ ಶೇ.83ರಷ್ಟು(ಪಾಕಿಸ್ತಾನದ ವಾರ್ಷಿಕ ಜಿಡಿಪಿ 320 ಬಿಲಿಯನ್ ಡಾಲರ್) ಆಗಲಿದೆ ಎಂದು ತಿಳಿಸಿದೆ.

ಕಳೆದ ತಿಂಗಳು ಕೇಂದ್ರ ಸರ್ಕಾರ ಬಡವರು ಹಾಗೂ ಆಹಾರ ಭದ್ರತೆಗೆ ನೆರವು ನೀಡುವ ನಿಟ್ಟಿನಲ್ಲಿ 1.74ಲಕ್ಷ ಕೋಟಿ ರೂಪಾಯಿ ಆರ್ಥಿಕ ನೆರವನ್ನು ಘೋಷಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next