ಹೊಸದಿಲ್ಲಿ: ಭಾರತದಲ್ಲಿ ಶೇ.1ರಷ್ಟು ಶ್ರೀಮಂತರ ಬಳಿಯೇ ದೇಶದ ಒಟ್ಟು ಸಂಪತ್ತಿನ ಪೈಕಿ ಶೇ.40ರಷ್ಟು ಸಂಪತ್ತು ಹಂಚಿಕೆಯಾಗಿದ್ದು, ಒಟ್ಟು ಜನಸಂಖ್ಯೆಯ ಉಳಿದ ಶೇ.50ರಷ್ಟು ಜನರು ಒಟ್ಟು ಸಂಪತ್ತಿನಲ್ಲಿ ಕೇವಲ ಶೇ.3ರಷ್ಟು ಹಂಚಿಕೆಯನ್ನು ಹೊಂದಿದ್ದಾರೆಂದು ಅಧ್ಯಯನವೊಂದು ಬಹಿರಂಗಪಡಿಸಿದೆ.
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಮೊದಲ ದಿನದಂದೇ ಆಕ್ಸಫಮ್ ಇಂಟರ್‌ನ್ಯಾಶನಲ್ ಎನ್ನುವ ಹಕ್ಕುಗಳ ಸಂಘಟನೆ, ಭಾರತಕ್ಕೆ ಸಂಬಂಧಿಸಿದ ಅಸಮಾನತೆ ವರದಿಯನ್ನು ಬಿಡುಗಡೆಗೊಳಿಸಿದೆ.
ಅಲ್ಲದೇ ಭಾರತದ ಅಗ್ರ 10 ಶ್ರೀಮಂತರಿಗೆ ಶೇ.5ರಷ್ಟು ತೆರಿಗೆ ವಿಧಿಸುವ ಮೂಲಕ, ಸಂದಾಯವಾಗಬಹುದಾದ ಹಣದಲ್ಲಿ, ಶಾಲೆ ಬಿಟ್ಟಿರುವ ಮಕ್ಕಳನ್ನು ಮತ್ತೆ ಶಾಲೆಗೆ ಕರೆತಂದು ನೀಡಲು ಬೇಕಿರುವ ವೆಚ್ಚವನ್ನೇ ಭರಿಸಬಹುದು ಎಂದಿದೆ.
ಜತೆಗೆ ಕಳೆದ 2 ವರ್ಷಗಳಲ್ಲಿ ವಿಶ್ವದ ಜನಸಂಖ್ಯೆ ಗಳಿಸಿರುವ ಒಟ್ಟು ಸಂಪತ್ತಿಗಿಂತ ಶೇ.2ರಷ್ಟು ಹೆಚ್ಚು ಸಂಪತ್ತನ್ನು ಜಗತ್ತಿನ ಶೇ.1ರಷ್ಟು ಶ್ರೀಮಂತರು ಗಳಿಸಿದ್ದಾರೆ. ಹಣದುಬ್ಬರ ಸಮಸ್ಯೆ ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಕನಿಷ್ಠ 1.7 ಶತಕೋಟಿ ಮಂದಿಗೆ ವೇತನ ಕಡಿತಗೊಳಿಸ ಲಾಗುತ್ತಿರುವ ಈ ಸಂದರ್ಭದಲ್ಲೂ ಶ್ರೀಮಂತರ ಆದಾಯ ದಿನಕ್ಕೆ ಶೇ.2.7 ಶತಕೋಟಿ ಡಾಲರ್‌ನಷ್ಟು ಏರಿಕೆಯಾಗುತ್ತಿದೆ ಎಂದು ಹೇಳಿದೆ.