ನವದೆಹಲಿ: ಕ್ಷಿಪಣಿ ರಕ್ಷಣಾ ವ್ಯವಸ್ಥೆ ಎಸ್-400 ಟ್ರೈಂಫ್ ಖರೀದಿಗೆ ಭಾರತ ಎಲ್ಲಾ ಅರ್ಹತೆ ಪಡೆದಿದೆ. ಅಮೆರಿಕದ ಒತ್ತಡಕ್ಕೆ ಮಣಿದು ರಷ್ಯಾದ ಜತೆಗಿನ ರಕ್ಷಣಾ ಬಾಂಧವ್ಯ ಪ್ರಮಾಣ ತಗ್ಗಿಸುವ ಪ್ರಶ್ನೆಯೇ ಇಲ್ಲವೆಂಬ ಖಡಕ್ ಸಂದೇಶವನ್ನು ಕೇಂದ್ರ ಸರ್ಕಾರ ಮಂಗಳವಾರ ನೀಡಿದೆ.
ಇದೇ ಅಂಶವನ್ನು ಬುಧವಾರದಿಂದ 3 ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿರುವ ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೊಂಪ್ಯೋ ಅವರಿಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿಳಿಸಲಿದ್ದಾರೆ. ಸಾರ್ವಜನಿಕವಾಗಿ ಮತ್ತು ಖಾಸಗಿ ಮಟ್ಟದಲ್ಲಿ ರಷ್ಯಾ ಜತೆಗಿನ 40 ಸಾವಿರ ಕೋಟಿ ರೂ. ವೆಚ್ಚದ ಡೀಲ್ ಬಗ್ಗೆ ಅಮೆರಿಕ ಜತೆ ಮಾತುಕತೆ ನಡೆದಿವೆ.
ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗುವ ಅಂಶಗಳಿಗೆ ಕೈಹಾಕುವುದಿಲ್ಲ ಎಂದು ಅವರು ಹೇಳಿದ್ದಾರೆ.
Advertisement
ಯಾವ ಕಾರಣಕ್ಕಾಗಿ ರಷ್ಯಾ ಹೊಂದಿರುವ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭಾರತದ ಖರೀದಿಸಲಿದೆ ಎನ್ನುವುದನ್ನು ವಾಷಿಂಗ್ಟನ್‌ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹಿರಿಯ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ.