ಹೊಸದಿಲ್ಲಿ : ಅಕ್ಟೋಬರ್ – ಡಿಸೆಂಬರ್ ಅವಧಿಯಲ್ಲಿನ ಭಾರತದ ಚಾಲ್ತಿ ಖಾತೆ ಕೊರತೆಯು (current account deficit ) ವರ್ಷದ ಹಿಂದೆ ಇದ್ದುದಕ್ಕಿಂತ ಹಚ್ಚಿನ ಉದ್ದಗಲ-ಆಳಕ್ಕೆ ಬೆಳೆದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಭಾರತದ ಆಮದು ಗಣನೀಯವಾಗಿ ಏರಿರುವುದು ಮತ್ತು ರಫ್ತು ಕುಗ್ಗಿರುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿರುವ ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ.
ಕಳೆದ ವರ್ಷ ಅಕ್ಟೋಬರ್ – ಡಿಸೆಂಬರ್ ಅವಧಿಯಲ್ಲಿ ಭಾರತದ ಚಾಲ್ತಿ ಖಾತೆ ಕೊರತೆ ಶೇ.1.4 ಅಥವಾ 8.0 ಬಿಲಿಯ ಡಾಲರ್ ಇತ್ತು. ಈ ವರ್ಷ ಅದೇ ಅವಧಿಗೆ ಚಾಲ್ತಿ ಖಾತೆ ಕೊರತೆ ಜಿಡಿಪಿಯ ಶೇ.2ಕ್ಕೆ ಏರಿದೆ; ಎಂದರೆ 13.5 ಬಿಲಿಯ ಡಾಲರ್‌ಗೆ ಏರಿದೆ ಎಂದು ಆರ್‌ಬಿಐ ಹೇಳಿದೆ.