Advertisement

Glass Bridge: ಪ್ರವಾಸಿಗರ ಆಕರ್ಷಣೆಗಾಗಿ ಕೇರಳದಲ್ಲಿ ಅತೀ ಉದ್ದದ ಗಾಜಿನ ಸೇತುವೆ ನಿರ್ಮಾಣ

11:47 AM Sep 09, 2023 | Team Udayavani |

ಇಡುಕ್ಕಿ(ಕೇರಳ): ಕರ್ನಾಟಕದಲ್ಲಿ ನದಿ, ಕಡಲು, ಪ್ರಕೃತಿ ಸೌಂದರ್ಯದ ತಾಣಗಳಿಗೇನೂ ಕೊರತೆ ಇಲ್ಲಾ. ಅದೇ ರೀತಿ ಕೇರಳದಲ್ಲಿಯೂ ಹಲವಾರು ಪ್ರವಾಸಿ ಕೇಂದ್ರಗಳಿವೆ. ಇದೀಗ ಅದಕ್ಕೊಂದು ಸೇರ್ಪಡೆ ಎಂಬಂತೆ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕೇರಳದ ಇಡುಕ್ಕಿಯ ವಾಗಮೋನ್‌ ಎಂಬಲ್ಲಿ ಭಾರತದ ಅತೀ ಉದ್ದನೆಯ ಗಾಜಿನ ಸೇತುವೆಯನ್ನು ನಿರ್ಮಿಸಲಾಗಿದ್ದು, ಪ್ರವಾಸಿಗರ ಕಣ್ಮನ ಸೆಳೆಯುವಂತಾಗಿದೆ.

Advertisement

ಇದನ್ನೂ ಓದಿ:iOS 17 ರಲ್ಲಿ ಕನ್ನಡ, ತಮಿಳು, ತೆಲುಗು ಮಲಯಾಳಂ ಗೆ ಲಿಪ್ಯಂತರ ಕೀಬೋರ್ಡ್

ನಿಮಗೇನಾದರು 3,500 ಅಡಿ ಎತ್ತರದಲ್ಲಿ‌ ಗಾಜಿನ ಸೇತುವೆ ಮೇಲೆ ಅಡ್ವೆಂಚರ್ ನಡಿಗೆ ಮಾಡಲು ಬಯಸುವುದಾದರೆ…

ಇಡುಕ್ಕಿಯ ವಾಗಮೋನ್‌ ಗೆ ಭೇಟಿ ನೀಡಲೇಬೇಕು. ಹೌದು ಕೇರಳದ ವಾಗಮೋನ್‌ ನಲ್ಲಿ ಕ್ಯಾಂಟಿಲಿವರ್‌ ಸ್ಕೈವಾಕ್‌ ಗಾಜಿನ ಸೇತುವೆಯನ್ನು ಪ್ರವಾಸೋದ್ಯಮ ಸಚಿವ ಮುಹಮ್ಮದ್‌ ರಿಯಾಜ್‌ ಅಡ್ವೆಂಚರ್‌ ಪಾರ್ಕ್‌ ನಲ್ಲಿ ನಡೆದ ಸಮಾರಂಭದಲ್ಲಿ ಉದ್ಘಾಟಿಸುವ ಮೂಲಕ ಪ್ರವಾಸಿಗರ ಭೇಟಿಗೆ ಅನುವು ಮಾಡಿಕೊಟ್ಟಿದ್ದಾರೆ.

Advertisement

40 ಮೀಟರ್‌ ಉದ್ದದ ಗಾಜಿನ ಸೇತುವೆ:

ಉಸಿರು ಬಿಗಿಹಿಡಿದು ನಡೆದು ಹೋಗಬೇಕಾದ ಸುಮಾರು 40 ಮೀಟರ್‌ ಉದ್ದದ ಗಾಜಿನ ಸೇತುವೆಯನ್ನು ಜಿಲ್ಲಾ ಪ್ರವಾಸೋದ್ಯಮ ಮಂಡಳಿ ಖಾಸಗಿ ಕಂಪನಿಯ ಸಹಭಾಗಿತ್ವದೊಂದಿಗೆ ಅಂದಾಜು 3 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, ಸುತ್ತಲೂ ಹಸಿರಿನಿಂದ ಕೂಡಿರುವ ಇಡುಕ್ಕಿಯ ವಾಗಮೋನ್‌ ಪ್ರದೇಶದ ವಿಹಂಗಮ ನೋಟವನ್ನು ಕಾಣಬಹುದಾಗಿದೆ.

ಈ ಸೇತುವೆ ನಿರ್ಮಾಣಕ್ಕಾಗಿ 35 ಟನ್‌ ಗಳಷ್ಟು ಸ್ಟೀಲ್‌ ಅನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗಿತ್ತು. ಒಂದು ಬಾರಿಗೆ ಈ ಕ್ಯಾಂಟಿಲಿವರ್‌ ಗ್ಲಾಸ್‌ ಸೇತುವೆ ಮೇಲೆ 15 ಮಂದಿ ತೆರಳಬಹುದಾಗಿದೆ. ಪ್ರತಿ ವ್ಯಕ್ತಿ 500 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ವರದಿ ತಿಳಿಸಿದೆ.

ಗಾಜಿನ ಸೇತುವೆ ಮೇಲೆ ಕೇವಲ 10 ನಿಮಿಷಗಳ ಕಾಲ ಮಾತ್ರ ಸಮಯ ಕಳೆಯಬಹುದಾಗಿದೆ. ಒಮ್ಮೆ ಈ 120 ಅಡಿ ಉದ್ದದ ಗಾಜಿನ ಸೇತುವೆ ಮೇಲಿಂದ ನಡೆದುಕೊಂಡು ಬಂದು ತುದಿ ಭಾಗವನ್ನು ತಲುಪಿದಾಗ ಮುಂಡಕಾಯಂ, ಕೋಟ್ಟಿಕಾಲ್‌ ಮತ್ತು ಕೊಕಾಯಾರ್‌ ಪ್ರದೇಶದ ದೂರದ ನೋಟವನ್ನು ವೀಕ್ಷಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next