Advertisement

ಭಾರತೀಯರ ಜೀವಿತಾವಧಿ 2 ವರ್ಷ ಹೆಚ್ಚಳ: ಈಗ ಸರಾಸರಿ ಆಯಸ್ಸು 69.7 ವರ್ಷ

09:53 AM Jun 14, 2022 | Team Udayavani |

ಹೊಸದಿಲ್ಲಿ: ಭಾರತೀಯರ ಜನನ ಸಮಯದ ಜೀವಿತಾವಧಿಗೆ 2015-19ರ ನಡುವಣ ನಾಲ್ಕು ವರ್ಷಗಳ ಅವಧಿಯಲ್ಲಿ 2ವರ್ಷ ಸೇರ್ಪಡೆ ಯಾಗಿದ್ದು, ಜೀವಿತಾವಧಿಯು ಸರಾಸರಿ 69.7 ವರ್ಷಗಳಿಗೆ ಏರಿಕೆಯಾಗಿದೆ. ಆದರೆ ಇದು ಜಾಗತಿಕ ಸರಾಸರಿಯಾಗಿರುವ 72.6 ವರ್ಷ ಗಳಿಗಿಂತ ಬಹಳ ಕಡಿಮೆಯಿದೆ.

Advertisement

ಇತ್ತೀಚೆಗೆ ಬಿಡುಗಡೆಯಾದ “ಅಬ್ರಿಡ್ಜ್ಡ್‌ ಲೈಫ್ ಟೇಬಲ್ಸ್‌ 2015-19′ ವರದಿಯಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ಭಾರತೀಯರ ಜೀವಿತಾವಧಿ 2 ವರ್ಷ ಹೆಚ್ಚಳವಾಗಲು ಬರೋಬ್ಬರಿ 10 ವರ್ಷಗಳು ಬೇಕಾದವು ಎಂದು ವರದಿ ಹೇಳಿದೆ. ಜನನ ಸಮಯದ ಜೀವಿತಾವಧಿ ದೊಡ್ಡ ಮಟ್ಟಿನ ಏರಿಕೆ ಕಾಣದಿರಲುಜನನ ಸಮಯದಲ್ಲಿ ಶಿಶು ಮರಣ ಮತ್ತು 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಹೆಚ್ಚಿರುವುದೇ ಕಾರಣ.

ಭಾರತದ ಗ್ರಾಮೀಣ ಪ್ರದೇಶಗಳ ಜನರ ಸರಾಸರಿ ಜೀವಿತಾವಧಿ 68.3 ವರ್ಷ, ನಗರ ಪ್ರದೇಶಗಳಲ್ಲಿ ಈ ಪ್ರಮಾಣ 73 ವರ್ಷ. ರಾಷ್ಟ್ರೀಯ ಮಟ್ಟದಲ್ಲಿ ಪುರುಷರ ಜೀವಿತಾವಧಿ 68.4 ವರ್ಷಗಳಾದರೆ, ಮಹಿಳೆಯರದ್ದು 71.1 ವರ್ಷಗಳಾಗಿವೆ. 1970-75ರಲ್ಲಿ ಭಾರತೀಯರ ಜನನ ಸಮಯದ ಜೀವಿತಾವಧಿ 49.7 ವರ್ಷ ಗಳಾಗಿದ್ದವು. 2015-19ರ ಅವಧಿಯಲ್ಲಿ ಇದು 69.7 ವರ್ಷಗಳಿಗೇರಿದೆ. 4 ದಶಕಗಳಲ್ಲಿ ಜೀವಿತಾವಧಿಯು 20 ವರ್ಷಗಳಷ್ಟು ಹೆಚ್ಚಳ ಕಂಡಿದೆ. ರಾಜ್ಯದಲ್ಲಿ ಪುರುಷರ ಜೀವಿತಾವಧಿ: 67.9 ವರ್ಷ, ಮಹಿಳೆಯರ ಜೀವಿತಾವಧಿ: 71.3 ವರ್ಷ, ಒಟ್ಟಾರೆ ಜೀವಿತಾವಧಿ ಸರಾಸರಿ: 69.5.

ದಿಲ್ಲಿಯಲ್ಲಿ ಹೆಚ್ಚು
ದೇಶದಲ್ಲಿ ಅತೀ ಹೆಚ್ಚು ಜೀವಿತಾವಧಿ ಇರುವ ರಾಜ್ಯವೆಂದರೆ ದಿಲ್ಲಿ. ಇಲ್ಲಿ ಸರಾಸರಿ ಜೀವಿತಾವಧಿ 75.9 ವರ್ಷಗಳು. 2ನೇ ಸ್ಥಾನದಲ್ಲಿ ಕೇರಳ ಇದ್ದು, ಇಲ್ಲಿನ ಜನರ ಜೀವಿತಾವಧಿ 75.2 ವರ್ಷಗಳು. ಜನರ ಆಯಸ್ಸು ಕಡಿಮೆಯಿರುವ ರಾಜ್ಯವೆಂದರೆ ಛತ್ತೀಸ್‌ಗಢ-65.3 ವರ್ಷಗಳು.

ಜಾಗತಿಕ ಸ್ಥಿತಿಗತಿ
ಅತೀ ಹೆಚ್ಚು ಜೀವಿತಾವಧಿ ಇರುವ ದೇಶ ಜಪಾನ್‌: 85 ವರ್ಷಗಳು ನಾರ್ವೆ, ಆಸ್ಟ್ರೇಲಿಯಾ, ಸ್ವಿಜರ್ಲೆಂಡ್‌, ಐಸ್‌ಲ್ಯಾಂಡ್‌: 83 ವರ್ಷ ಭಾರತ: 69.7 ವರ್ಷಗಳು ಬಾಂಗ್ಲಾದೇಶ: 72.1 ವರ್ಷಗಳು ನೇಪಾಲ: 70.5 ವರ್ಷಗಳು

Advertisement

 

Advertisement

Udayavani is now on Telegram. Click here to join our channel and stay updated with the latest news.

Next