ಹೊಸದಿಲ್ಲಿ: ಈ ವರ್ಷ ಜನವರಿಯಿಂದ ಮಾರ್ಚ್ ವರೆಗೆಗಿನ ತ್ತೈಮಾಸಿಕದಲ್ಲಿ ನಗರ ನಿರುದ್ಯೋಗ ಪ್ರಮಾಣ ಶೇ.9.3ರಷ್ಟಕ್ಕೆ ಇಳಿಕೆ ಕಂಡಿದೆ. ನಾಲ್ಕು ತ್ತೈಮಾಸಿದಕದಲ್ಲೇ ಅತಿ ಕಡಿಮೆಯಾಗಿದೆ ಎಂದು ಸರಕಾರದ ವರದಿಯೊಂದು ಹೇಳಿದೆ.
ಈ ವರದಿ ಬಗ್ಗೆ ರಾಯrರ್ಸ್ ಸುದ್ದಿ ಪ್ರಕಟಿಸಿದ್ದು, ಸಾಂಖ್ಯಿಕ ಸಚಿವಾಲಯದ ಅಂಕಿ ಅಂಶಗಳನ್ನಿಟ್ಟುಕೊಂಡು ಹೇಳಿದೆ.
ಹಿಂದಿನ ತ್ತೈಮಾಸಿಕಕ್ಕಿಂತ ಮಾರ್ಚ್ ತ್ತೈಮಾಸಿಕದ ನಿರುದ್ಯೋಗ ಪ್ರಮಾಣ ಕಡಿಮೆಯಾಗಿತ್ತು. ಅದಕ್ಕೂ ಮೊದಲು ಇದು ಶೇ.9.9ರಷ್ಟಿತ್ತು ಎಂದು ಹೇಳಿದೆ. ಆದರೆ 2018 ಎಪ್ರಿಲ್-ಜೂನ್ ತ್ತೈಮಾಸಿಕ ವರದಿ ಲಭ್ಯವಿಲ್ಲ ಎಂದು ವರದಿ ಹೇಳಿದೆ.
ಆದರೆ ಇದರಲ್ಲಿ ಗ್ರಾಮೀಣ ನಿರುದ್ಯೋಗದ ಬಗ್ಗೆ ಯಾವುದೇ ಪ್ರಸ್ತಾವನೆ ಮಾಡಲಾಗಿಲ್ಲ. “ವಾರದ ಸ್ಥಿತಿಗತಿ’ಯನ್ನು ಆಧರಿಸಿದ ಅಧ್ಯಯನ ವಿಧಾನಗಳನ್ವಯ ಈ ವರದಿಯನ್ನು ತಯಾರಿಸಲಾಗಿದೆ. ಇದು ಸಣ್ಣ ಅವಧಿಯಲ್ಲಿ ನಿರುದ್ಯೋಗದ ಕುರಿತಾಗಿ ಒಂದು ಸಾಮಾನ್ಯ ಚಿತ್ರಣವನ್ನು ಕೊಡುತ್ತದೆ ಎಂದು ಹೇಳಿದೆ.
ಇನ್ನು ಯುವಕರಲ್ಲಿ 15-29 ವರ್ಷದವರಲ್ಲಿ ನಿರುದ್ಯೋಗ ಪ್ರಮಾಣವೂ ಕಡಿಮೆಯಾಗಿದೆ. ಇದು ಮಾರ್ಚ್ ತ್ತೈಮಾಸಿಕಕ್ಕೆ ಶೇ.22.5ರಷ್ಟಿದ್ದರೆ, ಅದಕ್ಕೂ ಮೊದಲು ಶೇ.23.7ರಷ್ಟಿತ್ತು.