Advertisement

ಮನೆಯಿಂದಲೇ ಕೆಲಸ ಐಟಿ ಮಂತ್ರ : ತೆರಿಗೆ, ಕಾರ್ಮಿಕರ ಕಾನೂನುಗಳಲ್ಲಿ ಬದಲಾವಣೆಗೆ ಮನವಿ

08:42 AM May 14, 2020 | Hari Prasad |

ಬೆಂಗಳೂರು/ಹೊಸದಿಲ್ಲಿ: ಕೋವಿಡ್ ವೈರಸ್ ಬಂದ ಬಳಿಕ ಮನೆಗಳೇ ಕಾಯಕದ ಕೈಲಾಸವಾಗಿವೆ.
ಟೆಕ್‌ ಪಾರ್ಕ್‌ಗಳನ್ನು ಅವಲಂಬಿಸಿದ್ದ 14.37 ಲಕ್ಷ ಕೋ.ರೂ. ಮೌಲ್ಯದ ಐಟಿ ವಲಯ ಈಗ ವಸತಿ ಪ್ರದೇಶಗಳಲ್ಲಿ ನೆಲೆ ಕಂಡುಕೊಳ್ಳುತ್ತಿದೆ.

Advertisement

ಇದೆಲ್ಲವೂ ವರ್ಕ್‌ ಫ್ರಂಮ್‌ ಹೋಮ್‌ ಪ್ರಭಾವ. ದೇಶದಲ್ಲಿ 43 ಲಕ್ಷ ಐಟಿ ಉದ್ಯೋಗಿಗಳಿದ್ದು, ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.

ಕೋವಿಡ್ ವ್ಯಾಪಿಸಿದ ಬಳಿಕ ಐಟಿ ವಲಯದ ಕಾರ್ಯ ಶೈಲಿ ಬದಲಾಗಿದೆ. ವೆಚ್ಚದ ವಿಧಾನವೂ ಹಿಂದಿನಂತಿಲ್ಲ. ಹೀಗಾಗಿ ಹೊಸ ಪರಿಸ್ಥಿತಿಗೆ ಅನುಗುಣವಾಗಿ ತೆರಿಗೆ ಮತ್ತು ಕಾರ್ಮಿಕರ ಕಾನೂನುಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರುವಂತೆ ಐಟಿ ಕ್ಷೇತ್ರದ ನಾಯಕರು ಸರಕಾರದ ಗಮನ ಸೆಳೆದಿದ್ದಾರೆ.

ತಿಂಗಳ ಆರಂಭದಲ್ಲಿ ಸರಕಾರಿ ಅಧಿಕಾರಿಗಳೊಂದಿಗೆ ಈ ಸಂಬಂಧ ಸಭೆ ನಡೆದಿದ್ದು, ಐಟಿ ನಾಯಕರು ಮನೆಯಿಂದ ಕೆಲಸ ಮಾಡುವ ಪದ್ಧತಿಯತ್ತ ಒಲವು ತೋರಿದ್ದಾರೆ. ಭವಿಷ್ಯದಲ್ಲಿ ಶೇ.50 ಐಟಿ ನೌಕರರು ಇದನ್ನು ಅನುಸರಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾನೂನುಗಳಲ್ಲಿ ಬದಲಾವಣೆ ತರುವಂತೆ ಕೋರಿದ್ದಾರೆ. ಈ ಬಗ್ಗೆ ನಾಸ್ಕಾಂ ವರದಿ ಸಿದ್ಧಪಡಿಸುತ್ತಿದ್ದು, ಕಾರ್ಮಿಕ ಖಾತೆ ಮತ್ತು ದೂರ ಸಂಪರ್ಕ ಖಾತೆ ಸಚಿವರಿಗೆ ಕಳುಹಿಸಿ ಮುಂದಿ ಕ್ರಮಗಳಿಗಾಗಿ ಮನವಿ ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

ಜತೆಗೆ ಈಗ ನೀಡಿರುವ ಕೆಲವು ವಿನಾಯಿತಿಗಳನ್ನು ಜುಲೈ ತಿಂಗಳವರೆಗೂ ಮುಂದುವರಿಸುವಂತೆ ಕೋರಲಾಗಿದೆ.
ವರ್ಕ್‌ ಫ್ರಂ‌ ಹೋಮ್‌ ಒಂದು ಹೊಸ ರೂಢಿಯಾಗುತ್ತಿದೆ. ಈಗಿರುವ ಕೆಲವು ಕಾರ್ಮಿಕ ಕಾನೂನುಗಳು ಇದಕ್ಕೆ ಪೂರಕವಾಗಿಲ್ಲ. ಇದನ್ನು ನಾವು ಹೊಸ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ ಎಂದು ಇನ್ಫೋಸಿಸ್‌ ಸಿಒಒ ಯು.ಬಿ.ಪ್ರವೀಣ್‌ ರಾವ್‌ ಅಭಿಪ್ರಾಯಪಟ್ಟಿದ್ದಾರೆ.

ಐಟಿ ಬೇಡಿಕೆಗಳೇನು?
– ಕೆಲಸದ ಅವಧಿ, ಪಾಳಿ ಸಮಯ ಮರು ನಿಗದಿಗೆ ಅನುಗುಣವಾಗಿ ಕಾರ್ಮಿಕ ಕಾನೂನು ಬದಲಾವಣೆ

– ಕೆಲಸದ ಸ್ಥಳದಲ್ಲಿ ಸುರಕ್ಷೆ ಮತ್ತು ಆರೋಗ್ಯದಾಯಕ ವಾತಾವರಣ ನಿರ್ಮಿಸುವ ಉದ್ಯೋಗದಾತರ ಪಾತ್ರದ ಮರುಪರಿಶೀಲನೆ

– ವರ್ಕ್‌ ಫ್ರಂ‌ ಹೋಮ್‌ಗಾಗಿ ಸಂಸ್ಥೆಗಳು ಮಾಡುವ ವೆಚ್ಚವನ್ನು ವ್ಯವಹಾರ ವೆಚ್ಚವಾಗಿ ಪರಿಗಣಿಸುವ ಸಂಬಂಧ ಐಟಿ ಕಾನೂನಿನಲ್ಲಿ ಬದಲಾವಣೆ

– ವರ್ಕ್‌ ಫ್ರಂ‌ ಹೋಮ್‌ ಖಾಯಂ ಆಗಿಸಲು ಡಿಒಟಿ ವಿನಾಯಿತಿ

ಸೇವೆಗಳ ರಫ್ತಿನಲ್ಲಿ ಐಟಿ ವಲಯದ ಪಾಲು: 46%

ಒಟ್ಟು ದೇಶೀಯ ಉತ್ಪಾದನೆಗೆ ಐಟಿ ಕೊಡುಗೆ: 08%


2020ರಲ್ಲಿ ನಿರೀಕ್ಷಿತ ಸಾಫ್ಟ್ ವೇರ್‌ ರಫ್ತು: 11.06 ಲಕ್ಷ ಕೋ.ರೂ.

Advertisement

Udayavani is now on Telegram. Click here to join our channel and stay updated with the latest news.

Next