Advertisement

iPhone: ಐಫೋನ್‌ ಉತ್ಪಾದನೆಯಲ್ಲಿ ಚೀನಾಕ್ಕೆ ಭಾರತ ಸೆಡ್ಡು?

10:25 PM Aug 17, 2023 | Team Udayavani |

ವಾಷಿಂಗ್ಟನ್‌: ಹಲವು ವಿನೂತನ ಅಪ್ಡೆàಟ್‌ಗಳನ್ನು ಹೊಂದಿರುವ, ನವೀನ ಐಫೋನ್‌-15ರ ಮೊಬೈಲ್‌ ಉತ್ಪಾದನೆ ಪ್ರಮಾಣ ಭಾರತದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಆ್ಯಪಲ್‌ ಕಂಪನಿ ಭಾರತದಲ್ಲೇ ಉತ್ಪಾದನೆಯನ್ನು ಹೆಚ್ಚಿಸಿ, ಚೀನಾದ ಮೇಲಿನ ಅವಲಂಬನೆ ಕಡಿಮೆ ಮಾಡಲು ಯೋಜಿಸಿದೆ. ಅಮೆರಿಕ ಮತ್ತು ಚೀನಾ ನಡುವೆ ಆಂತರಿಕ ಬಿಕ್ಕಟ್ಟು ಹೆಚ್ಚಿದೆ, ಚೀನಾದೊಂದಿಗೆ ವ್ಯಾಪಾರವನ್ನು ಕಡಿಮೆ ಅಮೆರಿಕ ಚಿಂತಿಸಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲೇ ತನ್ನ ಉತ್ಪನ್ನಗಳ ಉತ್ಪಾದನೆ ಪ್ರಮಾಣ ಹೆಚ್ಚಿಸುವುದು ಆ್ಯಪಲ್‌ ಉದ್ದೇಶ.

Advertisement

ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿರುವ ಫಾಕ್ಸ್‌ಕಾನ್‌ ಟೆಕ್ನಾಲಜಿ ಗ್ರೂಪ್‌ ಹೊಸ ಆವೃತ್ತಿಯನ್ನು ಉತ್ಪಾದಿಸುತ್ತಿದೆ. ಚೀನಾದಿಂದ ನೂತನ ಆವೃತ್ತಿಯ ಮೊಬೈಲ್‌ಗ‌ಳು ಹಡಗನ್ನೇರಿದ ಕೆಲವೇ ವಾರಗಳಲ್ಲಿ, ಭಾರತದಲ್ಲೂ ಈ ಮೊಬೈಲ್‌ಗ‌ಳು ಲಭ್ಯವಾಗಲಿವೆ. ಇದಕ್ಕೆ ಆ್ಯಪಲ್‌ ಕಂಪನಿ ಭಾರತದಲ್ಲಿ ಉತ್ಪಾದನೆ ಹೆಚ್ಚಿಸಲು ಮಾಡಿರುವ ನಿರ್ಧಾರವೇ ಕಾರಣ.

ಐಫೋನ್‌ 14ಕ್ಕೆ ಮುನ್ನ ಭಾರತದಲ್ಲಿ ಜೋಡಿಸಲ್ಪಡುತ್ತಿದ್ದ ಆ್ಯಪಲ್‌ ಮೊಬೈಲ್‌ಗ‌ಳ ಸಂಖ್ಯೆ ತೀರಾ ಕಡಿಮೆಯಾಗಿತ್ತು. ಚೀನಾದಿಂದ ಮೊಬೈಲ್‌ಗ‌ಳು ಬರುವುದೂ ತಡವಾಗುತ್ತಿತ್ತು. ಆ್ಯಪಲ್‌ ಕಳೆದ ವರ್ಷ ಶೇ.7ರಷ್ಟು ಮೊಬೈಲ್‌ಗ‌ಳನ್ನು ಭಾರತದಲ್ಲೇ ಉತ್ಪಾದಿಸಿತು. ಈ ಬಾರಿ ಚೀನಾಕ್ಕೆ ಸರಿಸಮನಾಗಿ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ ಎಂದು ಮೂಲಗಳು ಹೇಳಿವೆ. ಐಫೋನ್‌ 15 ಮಾರುಕಟ್ಟೆಗೆ ಲಭ್ಯವಾಗುವುದರ ಬಗ್ಗೆ ಸೆ.12ರಂದು ಪ್ರಕಟವಾಗುವ ಸಾಧ್ಯತೆಯಿದೆ.

3 ವರ್ಷಗಳಲ್ಲೇ ವಿನೂತನ ಅಪ್ಡೆಟ್‌: ಕಳೆದ ಮೂರು ವರ್ಷಗಳಲ್ಲೇ ಕಾಣಿಸದ ಅಪ್ಡೆಟ್‌ಗಳನ್ನು ಐಫೋನ್‌ ಹೊಸ ಆವೃತ್ತಿಯಲ್ಲಿ ಕಾಣಲು ಸಾಧ್ಯವಿದೆ. ಕ್ಯಾಮೆರಾ ಇನ್ನಷ್ಟು ಶಕ್ತಿಶಾಲಿಯಾಗಬಹುದು, ಪ್ರೊ ಮಾಡೆಲ್‌ಗೆ 3 ನ್ಯಾನೊಮೀಟರ್‌ ಪ್ರೊಸೆಸರ್‌ ಸೇರಿಕೊಳ್ಳಬಹುದು.

ಉತ್ಪಾದನೆ ತಗ್ಗಬಹುದು
ಆ್ಯಪಲ್‌ ಕಂಪನಿ ಐಫೋನ್‌ 15ರ ಉತ್ಪಾದನೆಯ ಪ್ರಮಾಣ ಕಡಿಮೆ ಮಾಡುವ ನಿರೀಕ್ಷೆಯಿದೆ. ಮೊಬೈಲ್‌ನ ಬಿಡಿಭಾಗಗಳ ಲಭ್ಯತೆ ಕಡಿಮೆಯಿರುವುದರಿಂದ ಹೀಗಾಗಬಹುದು. ಹಿಂದೆ 8.3 ಕೋಟಿ ಮೊಬೈಲ್‌ ಉತ್ಪಾದನೆಯಾಗಬಹುದೆಂದು ಅಂದಾಜಿಸಲಾಗಿತ್ತು, ಈಗದು 7.7 ಕೋಟಿಗಿಳಿಯಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next