Advertisement

ಭಾರತದ ಅತಿಯಾದ ಕ್ರಿಕೆಟಿಗೆ ಲಗಾಮು?

02:38 PM Nov 29, 2017 | Team Udayavani |

ಹೊಸದಿಲ್ಲಿ: ಭಾರತೀಯ ಕ್ರಿಕೆಟಿಗರು ವಿಪರೀತ ಹಾಗೂ ಬಿಡುವಿಲ್ಲದ ಪಂದ್ಯಗಳಿಂದ ದಣಿದಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ. ಮಾತ್ರವಲ್ಲ, ನಾಯಕ ವಿರಾಟ್‌ ಕೊಹ್ಲಿಯೂ ಕ್ರಿಕೆಟ್‌ ಅತಿಯಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸಿಹಿ ಸುದ್ದಿಯೊಂದು ಬಂದಿದೆ. ತಂಡದ ಕ್ರಿಕೆಟ್‌ ಆಡುವ ದಿನಗಳನ್ನು 140ರಿಂದ 80ಕ್ಕಿಳಿಸಲು ಬಿಸಿಸಿಐನ ಸುಪ್ರೀಂ ನಿಯೋಜಿತ ಆಡಳಿತಾಧಿಕಾರಿಗಳ ಸಮಿತಿ ಚಿಂತಿಸಿದೆ. ಈ ಬಗ್ಗೆ ಸ್ವತಃ ಆಡಳಿತಾಧಿಕಾರಿಗಳ ಮುಖ್ಯಸ್ಥ ವಿನೋದ್‌ ರಾಯ್‌ ಸುಳಿವು ನೀಡಿದ್ದಾರೆ.

Advertisement

“ನಾವೇ ಕೈಯಾರೆ ಚಿನ್ನದ ಬಾತುಕೋಳಿಗಳನ್ನು ಕೊಲ್ಲಬಾರದು. ಆದ್ದರಿಂದ ಕ್ರಿಕೆಟಿಗರು ಹೊಸದಿಲ್ಲಿ ಟೆಸ್ಟ್‌ ವೇಳೆ ತಮ್ಮ ಅಭಿಪ್ರಾಯವನ್ನು ವಿಸ್ತೃತವಾಗಿ ತಿಳಿಸಲಿದ್ದಾರೆ. ಅನಂತರ ಭವಿಷ್ಯದ ವೇಳಾಪಟ್ಟಿಯನ್ನು ನಿರ್ಧರಿಸಲಿದ್ದೇವೆ. ಮುಂದಿನ ದಿನಗಳಲ್ಲಿ ಈಗ ಆಡುತ್ತಿರುವ 50ಕ್ಕೂ ಹೆಚ್ಚು ಪಂದ್ಯಗಳ ಬದಲು ಸರಾಸರಿ ವಾರ್ಷಿಕ 32 ಪಂದ್ಯಗಳನ್ನು ಆಡಿಸಲು ಯೋಚಿಸುತ್ತಿದ್ದೇವೆ’ ಎಂದು ವಿನೋದ್‌ ರಾಯ್‌ ಹೇಳಿದ್ದಾರೆ.

ಭಾರತೀಯ ಕ್ರಿಕೆಟಿಗರಿಗೆ ನಿಗದಿತ ಕ್ರಿಕೆಟ್‌ ಪಂದ್ಯಗಳ ಜತೆಗೆ ಹತ್ತಿರ ಹತ್ತಿರ 2 ತಿಂಗಳ ವರೆಗೆ ನಡೆಯುವ ಐಪಿಎಲ್‌ನಲ್ಲೂ ಆಡುವ ಅನಿವಾರ್ಯತೆಯಿದೆ. ಇದು, ಆಟಗಾರರು ತೀವ್ರ ರೀತಿಯಲ್ಲಿ ದಣಿಯುವಂತೆ ಮಾಡುತ್ತದೆ. ಇದನ್ನೂ ಬಿಸಿಸಿಐ ಆಡಳಿತಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next