ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ಈ ವರ್ಷದ ಜಿ20 ಶೃಂಗಸಭೆ ನಡೆಯುತ್ತಿದ್ದು, ಇದರ ಅಂಗವಾಗಿ ಲೋಗೊ ವಿನ್ಯಾಸ ಅಂತಿಮಗೊಳಿಸಲಾಗಿದೆ.
ಜಿ20 ಲೋಗೊದಲ್ಲಿ ಎರಡು ಕೈಜೋಡಿಸಿದ ನಮಸ್ತೆ ಚಿತ್ರ ಮತ್ತು ಜಿ20 ಎಂಬುದು ತ್ರಿವರ್ಣ ಬಣ್ಣದಲ್ಲಿದೆ. ದೇಶದ ಹೆಸರನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಕೇಂದ್ರ ಸರ್ಕಾರ ಅಧಿಕೃತವಾಗಿ ಲೋಗೊ ಬಿಡುಗಡೆಗೊಳಿಸಲಿದೆ.
ಜಿ20 ಲೋಗೊ ಕುರಿತು ಸಾರ್ವಜನಿಕರಿಂದ ವಿದೇಶಾಂಗ ಸಚಿವಾಲಯ ಸಲಹೆಗಳನ್ನು ನಿರೀಕ್ಷಿಸಿತ್ತು. ಇದಕ್ಕೆ ಪ್ರತಿಯಾಗಿ ಸಾರ್ವಜನಿಕರು 2,000 ಹೆಚ್ಚು ಲೋಗೊ ವಿನ್ಯಾಸಗಳನ್ನು ಕಳುಹಿಸಿದ್ದರು.
ಇತ್ತೀಚೆಗೆ ಕೇಂದ್ರ ಸರ್ಕಾರ, ಜಿ20 ಶೃಂಗಸಭೆಯ ಈ ವರ್ಷದ ಥೀಮ್ “ಸೋಲ್ ಆಫ್ ಇಂಡಿಯಾ'(ಭಾರತದ ಹೃದಯ) ಬಿಡುಗಡೆಗೊಳಿಸಿತ್ತು.
2022ರ ಡಿ.1ರಿಂದ 2023ರ ನ.30ರವೆರೆಗೆ ಒಂದು ವರ್ಷದ ಕಾಲ ಜಿ20 ಶೃಂಗಸಭೆಯು ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಇದರ ಅಂಗವಾಗಿ ಡಿಸೆಂಬರ್‌ನಲ್ಲಿ ಭಾರತದ 55 ನಗರಗಳಲ್ಲಿ 200ಕ್ಕೂ ಹೆಚ್ಚು ಸಭೆಗಳು ನಡೆಯಲಿವೆ.