Advertisement

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?

06:13 PM May 06, 2024 | Team Udayavani |

ಧರ್ಮಶಾಲಾ: ಭಾರತದ ಮೊಟ್ಟಮೊದಲ ‘ಹೈಬ್ರಿಡ್ ಪಿಚ್’ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ (ಎಚ್‌ಪಿಸಿಎ) ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಅನಾವರಣಗೊಂಡಿತು.

Advertisement

ಈ ಸಮಾರಂಭದಲ್ಲಿ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಮತ್ತು ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಮತ್ತು ಎಸ್‌ಐಎಸ್‌ನ ಅಂತರರಾಷ್ಟ್ರೀಯ ಕ್ರಿಕೆಟ್ ನಿರ್ದೇಶಕ ಪಾಲ್ ಟೇಲರ್ ಸೇರಿದಂತೆ ಕ್ರಿಕೆಟ್ ಗಣ್ಯರು ಉಪಸ್ಥಿತರಿದ್ದರು.

“ಇಂಗ್ಲೆಂಡ್‌ನ ಲಾರ್ಡ್ಸ್ ಮತ್ತು ದಿ ಓವಲ್‌ನಂತಹ ಐಕಾನಿಕ್ ಸ್ಥಳಗಳಲ್ಲಿ ಯಶಸ್ಸಿನ ನಂತರ ಹೈಬ್ರಿಡ್ ಪಿಚ್‌ಗಳ ಪರಿಚಯವು ಭಾರತದಲ್ಲಿ ಕ್ರಿಕೆಟ್‌ ನಲ್ಲಿ ಹೊಸ ಕ್ರಾಂತಿ ಉಂಟುಮಾಡುತ್ತದೆ” ಎಂದು ಧುಮಾಲ್ ಹೇಳಿದರು.

ನೈಸರ್ಗಿಕ ಟರ್ಫ್ ಅನ್ನು ಸಿಂಥೆಟಿಕ್ ಫೈಬರ್‌ಗಳೊಂದಿಗೆ ಸಂಯೋಜಿಸುವ ಹೈಬ್ರಿಡ್ ಪಿಚ್, ಹೆಚ್ಚಿನ ಬಾಳಿಕೆ ಮತ್ತು ಸ್ಥಿರವಾದ ಆಟದ ಸಾಮರ್ಥ್ಯವನ್ನು ನೀಡುತ್ತದೆ. ಇದು ಗ್ರೌಂಡ್ ಸಿಬ್ಬಂದಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಪಿಚ್ ನಲ್ಲಿ ಕೇವಲ 5% ಸಿಂಥೆಟಿಕ್ ಫೈಬರ್‌ಗಳೊಂದಿಗೆ, ಕ್ರಿಕೆಟ್‌ಗೆ ಅಗತ್ಯವಾದ ನೈಸರ್ಗಿಕ ಗುಣಲಕ್ಷಣಗಳನ್ನು ಕಾಪಾಡಲಾಗುತ್ತದೆ.

Advertisement

ಎಚ್ ಪಿಸಿಎ ಜತೆಗಿನ ಪಾಲುದಾರಿಕೆಗೆ ಟೈಲರ್ ಸಂತಸ ವ್ಯಕ್ತಪಡಿಸಿದ್ದಾರೆ. “ಐಸಿಸಿಯ ಅನುಮೋದನೆಯೊಂದಿಗೆ, ಈ ಪಿಚ್‌ ಗಳು ಕ್ರೀಡೆಯ ಮೇಲೆ ಧನಾತ್ಮಕ ಪರಿಣಾಮ ಬೀರುವುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ. ಮುಂದಿನ ದಿನಗಳಲ್ಲಿ ಮುಂಬೈ ಮತ್ತು ಅಹಮದಾಬಾದ್‌ ನಲ್ಲಿ ಹೈಬ್ರಿಡ್ ಪಿಚ್ ಗಳ ಕೆಲಸ ಪ್ರಾರಂಭವಾಗುತ್ತವೆ” ಎಂದು ಅವರು ಹೇಳಿದರು.

ಟಿ20 ಮತ್ತು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಗಾಗಿ ಐಸಿಸಿ ಇತ್ತೀಚಿಗೆ ಹೈಬ್ರಿಡ್ ಪಿಚ್‌ ಗಳನ್ನು ಅನುಮೋದಿಸಿದೆ. ಈ ವರ್ಷದಿಂದ ನಾಲ್ಕು-ದಿನದ ಕೌಂಟಿ ಚಾಂಪಿಯನ್‌ ಶಿಪ್‌ ಗಳಲ್ಲಿ ಹೈಬ್ರಿಡ್ ಬಳಕೆಯನ್ನು ವಿಸ್ತರಿಸಲು ಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next