ನವದೆಹಲಿ: ದೇಶದಲ್ಲಿ ಫೆಬ್ರವರಿ ತಿಂಗಳ ಸಗಟು ದರ ಸೂಚ್ಯಂಕ ಹಣದುಬ್ಬರ ಪ್ರಮಾಣ (ಡಬ್ಲೂéಪಿಐ) ಶೇ.3.85 ಆಗಿದೆ. ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯಂತ ಕನಿಷ್ಠ ಪ್ರಮಾಣದ್ದು ಎಂದು ಕೇಂದ್ರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ತಿಳಿಸಿದೆ.
Advertisement
ಇಂಧನ, ವಿದ್ಯುತ್, ಕೆಲವೊಂದು ಆಹಾರ ವಸ್ತುಗಳು, ಉತ್ಪಾದನಾ ಕ್ಷೇತ್ರದಲ್ಲಿನ ವಸ್ತುಗಳ ದರಗಳಲ್ಲಿ ಇಳಿಕೆಯಾಗಿರುವುದರಿಂದ ಹಣದುಬ್ಬರವೂ ಕಡಿಮೆಯಾಗಿದೆ. ಸತತ 9 ತಿಂಗಳಿಂದ ಸಗಟು ಹಣದುಬ್ಬರ ಪ್ರಮಾಣ ತಗ್ಗಿದೆ. ಡಬ್ಲ್ಯೂ ಪಿಐ ಜನವರಿಯಲ್ಲಿ ಶೇ.4.73, ಕಳೆದ ಫೆಬ್ರವರಿಯಲ್ಲಿ ಶೇ.13.43 ಆಗಿತ್ತು.