Advertisement

“ಭಾರತದ ವೇಗದ ಬೌಲಿಂಗ್‌ ವಿಶ್ವದಲ್ಲೇ ಬಲಿಷ್ಠ’

10:18 AM Dec 23, 2019 | Sriram |

ಜೊಹಾನ್ಸ್‌ಬರ್ಗ್‌: ಭಾರತದ ವೇಗದ ಬೌಲಿಂಗ್‌ ವಿಶ್ವದಲ್ಲೇ ಅತ್ಯುತ್ತಮವಾಗಿದ್ದು, ಹೆಚ್ಚು ಬಲಿಷ್ಠವಾಗಿದೆ ಎಂದು ದಕ್ಷಿಣ ಆಫ್ರಿಕಾದ ವೇಗಿ ಡೇಲ್‌ ಸ್ಟೇನ್‌ ಪ್ರಶಂಸಿಸಿದ್ದಾರೆ.

Advertisement

ಡಿ. 19ರಂದು ನಡೆದ ಐಪಿಎಲ್‌ ಹರಾಜಿನಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಡೇಲ್‌ ಸ್ಟೇನ್‌ ಅವರನ್ನು ಖರೀದಿಸಿದ್ದು, ಈ ಹಿನ್ನೆಲೆಯಲ್ಲಿ ಟ್ವಿಟರ್‌ನಲ್ಲಿ ಅಭಿಮಾ ನಿಯೊಬ್ಬರು ಆಫ್ರಿಕಾ ವೇಗಿಗೆ ಪ್ರಶ್ನೆಯೊಂದನ್ನು ರವಾನಿಸಿದ್ದರು. “ನಿಮ್ಮ ಪ್ರಕಾರ, ವಿಶ್ವದ ಬಲಿಷ್ಠ ವೇಗದ ಬೌಲಿಂಗ್‌ ವಿಭಾಗವನ್ನು ಹೊಂದಿರುವ ತಂಡ ಯಾವುದು’ ಎಂಬ ಪ್ರಶ್ನೆಗೆ, ಭಾರತ ಎಂಬುದಾಗಿ ಸ್ಟೇನ್‌ ಉತ್ತರಿಸಿದ್ದಾರೆ.

“ಇತರ ತಂಡಗಳಿಗಿಂತ ಭಾರತದ ವೇಗಿಗಳು ಅತ್ಯಂತ ಹೆಚ್ಚು ಬಲಿಷ್ಠರಾಗಿದ್ದಾರೆ. ಯುವ ವೇಗಿಗಳನ್ನೇ ತಂಡ ನೆಚ್ಚಿಕೊಂಡಿದೆ’ ಎಂದು ಆಫ್ರಿಕಾದ ವೇಗಿ ಡೇಲ್‌ ಸ್ಟೇನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next