Advertisement

2026ರಲ್ಲಿ ವಿದ್ಯುನ್ಮಾನ ಸಾಧನ ರಫ್ತು ಮೌಲ್ಯ 120 ಬಿಲಿಯನ್‌ ಡಾಲರ್‌ಗೇರಿಕೆ!

08:39 PM Sep 30, 2022 | Team Udayavani |

ಚೆನ್ನೈ: 2025-26ರ ಹೊತ್ತಿಗೆ ಭಾರತದ ವಿದ್ಯುನ್ಮಾನ ಸಾಧನಗಳ ರಫ್ತು ಮೌಲ್ಯ 120 ಬಿಲಿಯನ್‌ ಡಾಲರ್‌ಗೇ ರಲಿದೆ… ಕೇಂದ್ರ ಸಚಿವ, ಕರ್ನಾಟಕದ ರಾಜೀವ್‌ ಚಂದ್ರೇಶೇಖರ್‌ ಅವರ ವಿಶ್ವಾಸದ ನುಡಿಗಳಿವು.

Advertisement

ಪ್ರಸ್ತುತ ದೇಶದ ವಿದ್ಯುನ್ಮಾನ ಸಾಧನಗಳ ಉತ್ಪಾದನಾ ಮೌಲ್ಯ 75 ಶತಕೋಟಿ ಡಾಲರ್‌ಗಳಷ್ಟಿದೆ.

2026ರಷ್ಟೊತ್ತಿಗೆ ಇದನ್ನು 300 ಶತಕೋಟಿ ಡಾಲರ್‌ಗಳಿಗೇರಿಸಬೇಕೆಂದು ಪ್ರಧಾನಿ ಮೋದಿ ಗುರಿ ನೀಡಿದ್ದಾರೆ ಎಂದು ಉದ್ಯಮ, ಕೌಶಲ್ಯಾಭಿವೃದ್ಧಿ, ವಿದ್ಯುನ್ಮಾನ, ತಂತ್ರಜ್ಞಾನ ಸಹಾಯಕ ಸಚಿವ ರಾಜೀವ್‌ ಹೇಳಿದ್ದಾರೆ.

2014ರವರೆಗೆ ಭಾರತ ಶೇ.90ರಷ್ಟು ಮೊಬೈಲ್‌ಗ‌ಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಈಗ ತನಗೆ ಅಗತ್ಯವಿರುವ ಶೇ.97ರಷ್ಟು ಮೊಬೈಲ್‌ಗ‌ಳನ್ನು ತನ್ನಲ್ಲೇ ಉತ್ಪಾದನೆ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next