Advertisement
ದೇಶದ 13 ಪ್ರಮುಖ ನಗರಗಳ ಒಟ್ಟು 5,389 ಮನೆಗಳನ್ನು ಆಯ್ದುಕೊಂಡು ಕೇಂದ್ರೀಯ ಬ್ಯಾಂಕ್ ಸಮೀಕ್ಷೆ ನಡೆಸಿದ್ದು, ದೇಶದ ಆರ್ಥಿಕತೆಯ ಬಗ್ಗೆ ಜನಾಭಿಪ್ರಾಯವನ್ನು ಸಂಗ್ರಹ ಮಾಡಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬಿಡುಗಡೆ ಮಾಡಿದ ಸಮೀಕ್ಷಾ ವರದಿಯಲ್ಲಿ “ದೇಶದ ಸಾಮಾನ್ಯ ಆರ್ಥಿಕ ಪರಿಸ್ಥಿತಿ ಡೋಲಾಯಮಾನವಾಗಿದೆ ‘ ಎಂದು ಅರ್ಧಕ್ಕಿಂತ ಹೆಚ್ಚು ಕುಟುಂಬಗಳು ಒಪ್ಪಿಕೊಂಡಿವೆ. 2019ರ ಮಾರ್ಚ್‌ನಲ್ಲಿ ಶೇ32.5ಕ್ಕೆ ಹೋಲಿಸಿದರೆ, 2020ರ ಜನವರಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ54.9ರಷ್ಟು ಕುಟುಂಬಗಳು ದೇಶದ ಸಾಮಾನ್ಯ ಆರ್ಥಿಕ ಪರಿಸ್ಥಿತಿ ಕಳೆದ ಒಂದು ವರ್ಷದಲ್ಲಿ ಹದಗೆಟ್ಟಿದೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಶೇ 27.1ರಷ್ಟು ಜನರು, ದೇಶದ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿದ್ದಾರೆ.
Related Articles
2019ರ ಜನವರಿಗೆ ಹೋಲಿಸಿದರೆ ಯಾವುದೇ ರೀತಿಯ ಬದಲಾವಣೆ ಕಂಡುಬಂದಿಲ್ಲ ಎಂದು ಶೇ.18ರಷ್ಟು ಕುಟುಂಬಗಳು ಒಪ್ಪಿಕೊಂಡಿವೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಸಮೀಕ್ಷೆಯಲ್ಲಿ ಅಹಮದಾಬಾದ್, ಬೆಂಗಳೂರು, ಭೋಪಾಲ…, ಚೆನ್ನೈ, ಹೊಸದಿಲ್ಲಿ, ಗುವಾಹಟಿ, ಹೈದರಾಬಾದ್, ಜೈಪುರ, ಕೋಲ್ಕತಾ, ಲಕ್ನೋ, ಮುಂಬೈ, ಪಾಟ್ನಾ ಮತ್ತು ತಿರುವನಂತಪುರಂ ಸೇರಿವೆ.
Advertisement
ಭವಿಷ್ಯದಲ್ಲಿ ಸುಧಾರಣೆ ಕಾಣಬಹುದುಸಮೀಕ್ಷೆಯಲ್ಲಿ ಶೇ 48.4ರಷ್ಟು ಜನರು ಮುಂದಿನ ವರ್ಷದಲ್ಲಿ ಉದ್ಯೋಗ ಪರಿಸ್ಥಿತಿ ಸುಧಾರಿಸುತ್ತದೆ ಎಂದಿದ್ದಾರೆ. ಪ್ರಸ್ತುತ ಉದ್ಯೋಗದ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಸುಮಾರು ಶೇ.57ರಷ್ಟು ಜನರು, ಒಂದು ವರ್ಷದ ಹಿಂದೆ ಇದೇ ಅವಧಿಗೆ ಹೋಲಿಸಿದರೆ ಪರಿಸ್ಥಿತಿ ಹದಗೆಟ್ಟಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿರುದ್ಯೋಗವು ಭಾರತೀಯ ಆರ್ಥಿಕತೆಯ ಪ್ರಮುಖ ಹಿನ್ನೆಡೆಯ ಅಂಶಗಳಲ್ಲಿ ಒಂದಾಗಿದೆ. ನಿರುದ್ಯೋಗ ಸಮಸ್ಯೆ
ಅಧಿಕೃತ ಮಾಹಿತಿಯ ಪ್ರಕಾರ, ನಿರುದ್ಯೋಗ ದರವು 2017-18ರಲ್ಲಿ ನಾಲ್ಕು ದಶಕಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.ಗೃಹ ಬಳಕೆಯ ವಸ್ತುಗಳ ಬೆಲೆಗಳು ಕಳೆದ ವರ್ಷಕ್ಕಿಂತ ಹೆಚ್ಚಾಗಿವೆ. ಖರ್ಚು ಸಹ ಏರಿಕೆಯಾಗಿದೆ. ಮುಂದಿನ ವರ್ಷದಲ್ಲಿ ಖರ್ಚಿನಲ್ಲಿ ಮತ್ತಷ್ಟು ಏರಿಕೆಯನ್ನು ನಿರೀಕ್ಷಿಸಲಾಗುತ್ತಿದೆ. ಶೇ 84.9ರಷ್ಟು ಕುಟುಂಬಸ್ಥರು ಹಣದುಬ್ಬರ ಪ್ರಸ್ತುತ ಏರಿಕೆಯಾಗಿದೆ ಎಂದಿದ್ದಾರೆ. 2019ರ ಡಿಸೆಂಬರ್‌ನಲ್ಲಿ ಗ್ರಾಹಕರ ಹಣದುಬ್ಬರವು ಶೇ 7.3ಕ್ಕಿಂತ ಹೆಚ್ಚಳವಾಗಿದೆ.