Advertisement

Finance: ಭಾರತದ ಆರ್ಥಿಕತೆ ಶೇ.7.3ರ ದರದಲ್ಲಿ ಪ್ರಗತಿ ನಿರೀಕ್ಷೆ

12:30 AM Jan 06, 2024 | Team Udayavani |

ಹೊಸದಿಲ್ಲಿ: 2023-24ರಲ್ಲಿ ಭಾರತದ ಆರ್ಥಿಕತೆಯು ಶೇ.7.3ರ ದರದಲ್ಲಿ ಪ್ರಗತಿ ಹೊಂದಲಿದೆ ಎಂದು ರಾಷ್ಟ್ರೀಯ ಸಾಂಖ್ಯೀಕ ಕಚೇರಿ ಅಂದಾಜಿಸಿದೆ. ಹಿಂದಿನ ವಿತ್ತೀಯ ವರ್ಷದಲ್ಲಿ ಆರ್ಥಿಕತೆಯ ಪ್ರಗತಿ ದರ ಶೇ.7.2 ಆಗಿತ್ತು.

Advertisement

2023-24ರ ಹಣಕಾಸು ವರ್ಷದ ಮೊದಲ ಮುಂಗಡ ಅಂದಾಜನ್ನು ಬಿಡುಗಡೆ ಮಾಡಿರುವ ಸಾಂಖ್ಯೀಕ ಕಚೇರಿ, ನೈಜ ಜಿಡಿಪಿ 171.79 ಲಕ್ಷ ಕೋಟಿ ರೂ.ಗೆ ತಲುಪುವ ಸಾಧ್ಯತೆಯಿದೆ. ಕಳೆದ ವರ್ಷ ಇದು 160.06 ಲಕ್ಷ ಕೋಟಿ ರೂ. ಆಗಿತ್ತು ಎಂದಿದೆ. ಇದೇ ವೇಳೆ, ಪ್ರಸಕ್ತ ವರ್ಷದ ಭಾರತ ಶೇ.6.2ರ ದರದಲ್ಲಿ ಪ್ರಗತಿ ಹೊಂದಲಿದೆ ಎಂದು ವಿಶ್ವಸಂಸ್ಥೆಯ ವರದಿ ಅಂದಾಜಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next