Advertisement

ಆರ್ಥಿಕತೆ ಸುಸ್ಥಿರ: ಎಡಿಬಿ

06:00 AM Sep 27, 2018 | Team Udayavani |

ನವದೆಹಲಿ: ಭಾರತದ ಆರ್ಥಿಕತೆ ಸುಸ್ಥಿರವಾಗಿಯೇ ಮುಂದುವರಿದಿದೆ ಎಂದು ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎಡಿಬಿ) ವರದಿಯಲ್ಲಿ ಹೇಳಲಾಗಿದೆ. ಪ್ರಸ್ತುತ ವಿತ್ತವರ್ಷದಲ್ಲಿ ದೇಶದ ವಿತ್ತೀಯ ಬೆಳವಣಿಗೆ ಶೇ. 7.3ರಲ್ಲಿ ಮುಂದುವರಿಯಲಿದೆ ಎಂದಿರುವ ಎಡಿಬಿ,  ರೂಪಾಯಿ ಮೌಲ್ಯ ಕುಸಿತ ಮತ್ತು ವಿತ್ತೀಯ ಮಾರುಕಟ್ಟೆಯಲ್ಲಿನ ಅಸ್ಥಿರತೆಯು ಸವಾಲಿನ ಸಂಗತಿಯಾಗಿದೆ. ವ್ಯಾಪಾರ ಸಂಘರ್ಷಗಳ ಮಾರುಕಟ್ಟೆ ಸಹಿಷ್ಣುತೆಯನ್ನು ಪರೀಕ್ಷಿಸಲಿವೆ. ಹೀಗಾಗಿ 2018-19ರ ವಿತ್ತವರ್ಷದಲ್ಲಿ ಶೇ.7.3 ಮತ್ತು 2019-20ರಲ್ಲಿ ಶೇ. 7.6ರ ಅಭಿವೃದ್ಧಿ ನಿರೀಕ್ಷಿಸಲಾಗಿದೆ. ನೋಟು ಅಮಾನ್ಯ, ಸರಕು ಮತ್ತು ಸೇವಾ ತೆರಿಗೆಯಿಂದ ಉಂಟಾದ ಸಮಸ್ಯೆ ನಿವಾರಣೆ ಆಗಿದೆ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next